ಭಾರತದ ಶಕ್ತಿ ಏನೆಂದು ಲೋಕಕ್ಕೆ ಸಂದೇಶ ಸಿಕ್ಕಿದೆ- ಪ್ರಧಾನಿ ಮೋದಿ

0
286

ಸನ್ಮಾರ್ಗ ವಾರ್ತೆ

ಲಡಾಕ್,ಜು.3: ದೇಶದ ಶಕ್ತಿ ಏನೆಂಬ ಸಂದೇಶವು ಲೋಕಕ್ಕೆ ಲಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಡಾಕಿನ ನಿಮುವಿನಲ್ಲಿ ಸೈನಿಕರನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು. ಗಲ್ವಾನಿನ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ಅವರು ಕಂಬನಿ ಅರ್ಪಿಸಿದರು.

ಲಡಾಕ್ ಭಾರತದ ಜನರ ಸ್ವಾಭಿಮಾನದ ಪ್ರತೀಕವಾಗಿದೆ. ಸೈನಿಕರ ಇಚ್ಛಾಶಕ್ತಿ ಪರ್ವಗಳಂತೆ ಉನ್ನತವಾಗಿದ್ದು, ಯೋಧರ ಕೈಗಳಲ್ಲಿ ದೇಶ ಭದ್ರವಾಗಿದೆ ಎಂದು ಅವರು ಹೇಳಿದರು. ಅತಿಕ್ರಮಣದ ಯುಗ ಕೊನೆಗೊಂಡಿತು. ದೇಶಕ್ಕೆ ಇನ್ನು ಅಭಿವೃದ್ಧಿಯ ದಿನಗಳಾಗಿವೆ. ಅಭಿವೃದ್ಧಿಗೆ ಮಾತ್ರವೇ ಇನ್ನು ಭವಿಷ್ಯವಿದೆ. ಗಡಿಯ ಅಭಿವೃದ್ಧಿಯ ಕೆಲಸಕ್ಕೆ ವೆಚ್ಚವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.

ದೇಶವನ್ನು ರಕ್ಷಿಸಲು ಯಾವ ತ್ಯಾಗಕ್ಕೂ ನಾವು ಸಿದ್ಧರಾಗಿದ್ದೇವೆ. ಅದಕ್ಕಿರುವ ಸಾಮರ್ಥ್ಯ ನಮಗಿದೆ. ಭೂಮಿಯಲ್ಲಿ, ಆಕಾಶದಲ್ಲಿ ಸಮುದ್ರದಲ್ಲಿ ದೇಶ ಶಕ್ತಿಶಾಲಿಯಾಗಿದೆ. ದುರ್ಬಲರಿಂದ ಶಾಂತಿ ತರಲು ಸಾಧ್ಯವಿಲ್ಲ. ಗಡಿಯಲ್ಲಿ ಮಹಿಳಾ ಸೈನಿಕರ ಉಪಸ್ಥಿತಿ ಪ್ರೇರಣಾತ್ಮಕವಾಗಿದೆ ಎಂದು ಅವರು ಹೇಳಿದರು.

ಭಾರತ ಚೀನಾ ಘರ್ಷಣೆ ಸಾಧ್ಯತೆ ಇರುವ ಪರಿಸ್ಥಿತಿಯಲ್ಲಿ ಶುಕ್ರವಾರ, ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಮುನ್ಸೂಚನೆಯಿಲ್ಲದೇ ಲೇಹ್ ಸಂದರ್ಶಿಸಿದರು. ಜಂಟಿ ಸೇನಾ ಮುಖ್ಯಸ್ಥ ಬಿಪಿನ್ ರಾವ್, ಭೂಸೇನೆ ಮುಖ್ಯಸ್ಥ ಎಂಎಂ ನರವನೆ ಅವರ ಜೊತೆಗೆ ಇದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.