ಮದ್ರಸಾಗಳಿಗೆ ಮೋದಿ ಸರಕಾರದಿಂದ ಶೇ.50 ಸ್ಕಾಲರ್ ಶಿಪ್

0
689

ಹೊಸದಿಲ್ಲಿ, ಜೂ. 14: ಹದಿನೇಳನೆ ಲೋಕಸಭೆಯಲ್ಲಿ ಪ್ರಚಂಡ ಬಹುಮತದಿಂದ ಆಯ್ಕೆಯಾಗಿರುವ ಬಿಜೆಪಿ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅಲ್ಪಸಂಖ್ಯಾತರಿಗೆ ದೊಡ್ಡ ಕೊಡುಗೆ ನೀಡಲು ಹೊರಟಿದ್ದಾರೆ ಎಂದು ವರದಿಯಾಗಿದೆ.

ಹರಿಭೂಮಿ ಎಂಬ ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಮೋದಿ ಸರಕಾರ ಮುಸ್ಲಿಮರಿಗೆ ದೊಡ್ಡ ಕೊಡುಗೆ ನೀಡಲು ಮುಂದಾಗಿದೆ. ಮದ್ರಸಾಗಳಿಗೆ ಶೇ 50 ಸ್ಕಾಲರ್ ಶಿಪ್ ನೀಡುವುದು ಮೋದಿ ಸರಕಾರದ ಚಿಂತನೆಯಾಗಿದೆ. ಇದು ಶೇ. 17ರಷ್ಟಿರುವ ಮುಸ್ಲಿಮರು ಇದರ ಫಲಾನುಭವಿಗಳಾಗಿದ್ದು ಮುತ್ತಲಾಕ್ ಕುರಿತು ಕೂಡ ಸರಕಾರ ಹೇಳಿಕೆ ನೀಡಲಿದೆ. ಎರಡನೆ ಅವಧಿಗೆ ಪ್ರಧಾನಿಯಾಗಿ ಆಯ್ಕೆಗೊಂಡ ಮೋದಿ ಮುಸ್ಲಿಂ ವೋಟು ಬ್ಯಾಂಕಿನತ್ತ ಕಣ್ಣು ನೆಟ್ಟಿದ್ದಾರೆ. ಈ ನೀತಿಯನ್ನು ಮೋದಿ ಸರಕಾರದ ಹೊಸ ಮುಸ್ಲಿಂ ನೀತಿ ಎಂದುಹೇಳಬಹುದು.