ಮೋದಿ ಟೀಕಾಕಾರ ಧ್ರುವ್ ರಥಿಗೆ ನಿಷೇಧ: ಬಡಬಡಿಸಿದ ಫೇಸ್‍ಬುಕ್‍, ಒಂದೇ ಗಂಟೆಯೊಳಗೆ ನಿಷೇಧ ಹಿಂತೆಗೆತ

0
1077

ಹೊಸದಿಲ್ಲಿ, ಮಾ. 19: ತೀವ್ರ ಮೋದಿ ವಿರೋಧಿ ನಿಲುವುಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆದಿರುವ ಧ್ರುವ್ ರಥಿಗೆ ಫೇಸ್‍ಬುಕ್ ನಿಷೇಧ ಹೇರಿ ತೀವ್ರ ಟೀಕೆಗೆ ಗುರಿಯಾದ ಫೇಕ್ ಬುಕ್, ಬಳಿಕ ಜಾಲತಾಣಿಗರ ಪ್ರತಿಭಟನೆಯನ್ನು ಎದುರಿಸಲಾಗದೆ ಒಂದೇ ಗಂಟೆಯೊಳಗೆ ನಿಷೇಧವನ್ನು ಹಿಂಪಡೆದು ನಗೆಪಾಟಲಿಗೀಡಾಗಿದೆ. ಆರಂಭದಲ್ಲಿ ಫೇಸ್ ಬುಕ್ ಒಂದು ತಿಂಗಳ ನಿಷೇಧವನ್ನು ವಿಧಿಸಿತ್ತು. ಬಿಜೆಪಿಯನ್ನು ವಿರೋಧಿಸಿದ್ದಕ್ಕೆ ಬಿಜೆಪಿ ನಿಷೇಧ ಹೇರಿದೆ ಎ೦ದು ಆಕ್ಷೇಪ ಕೇಳಿ ಬಂದಿತ್ತು. ಇದೀಗ ಫೇಸ್‍ಬುಕ್ ತಮ್ಮಿಂದ ತಪ್ಪಾಗಿದೆ ಎಂದು ಕ್ಷಮಾಯಾಚನೆಯನ್ನು ಕೂಡ ಮಾಡಿದೆ.

ಮೋದಿಯ ಅಧಿಕೃತ ಪುಟ ಮತ್ತು ಇತರ ಪ್ರಚಾರ ಪುಟಗಳಲ್ಲಿ ಇರುವುದಕ್ಕಿಂತ ಹೆಚ್ಚು ಫಾಲೋವರ್ಸ್ ತನ್ನ ಖಾತೆಗೆ ಇದ್ದಾರೆ ಎಂದು ಧ್ರುವ್‍ರಥಿ ನೆನಪಿಸಿದರು. ಅಡಾಲ್ಫ್ ಹಿಟ್ಲರ್ ನ ಆತ್ಮ ಚರಿತ್ರೆಯಿಂದ ಉದ್ಧರಣೆಯನ್ನು ಪಡೆದದ್ದಕ್ಕಾಗಿ ತನ್ನನ್ನು ಫೇಸ್‍ಬುಕ್ ನಿಷೇಧಿಸಿದೆ. ಇದು ಸಾಮಾಜಿಕ ಮಾನದಂಡಗಳ ಪ್ರಕಾರ ನಡೆದಿಲ್ಲ ಎಂದು ಅವರು ಹೇಳಿದರು.

ನರೇಂದ್ರ ಮೋದಿ ಸರಕಾರವನ್ನು ವಸ್ತುನಿಷ್ಠವಾಗಿ ವಿಮರ್ಶಿಸುವ ಧ್ರುವ್‍ ರಥಿಯ ಯುಟ್ಯೂಬ್ ಚ್ಯಾನೆಲ್‍ಗೆ ಹದಿನೇಳು ಲಕ್ಷ ಫಾಲೊವರ್ಸ್‍ಗಳಿದ್ದಾರೆ. ಧ್ರುವ್‍ರ ಫೇಸ್‍ಬುಕ್ ಪುಟಕ್ಕೆ 5,040,000 ಫಾಲೋವರ್ಸ್ ಇದ್ದರೆ ಟ್ವಿಟರ್ ನಲ್ಲಿ 2,20,000 ಮಂದಿ ಫಾಲೋವರ್ಸ್ ಇದ್ದಾರೆ. ತನಗೆ ಫೇಸ್‍ಬುಕ್ ನಿಷೇಧ ಹೇರಿದ್ದನ್ನು ಅವರೇ ತನ್ನ ಟ್ವಿಟರ್ ಖಾತೆಯ ಮೂಲಕ ಬಹಿರಂಗಪಡಿಸಿದ್ದರು.