ಮೋದಿ ಪ್ರಧಾನಿ ಸ್ಥಾನಕ್ಕೆ ಯೋಗ್ಯರಲ್ಲ- ಮಾಯಾವತಿ

0
91

ಲಕ್ನೊ,ಮೇ 17: ನರೇಂದ್ರ ಮೋದಿ ಪ್ರಧಾನಿ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಬಹುಜನ ಸಮಾಜ ಪಾರ್ಟಿ ಅಧ್ಯಕ್ಷೆ ಮಾಯಾವತಿ ಹೇಳಿದರು. ದೇಶ ಮತ್ತು ಜನರ ಕಲ್ಯಾಣಕ್ಕಾಗಿರುವ ಕಾರ್ಯಕ್ರಮಗಳನ್ನು ನೋಡುವಾಗ ಮೋದಿಗಿಂತ ಪ್ರಧಾನಿ ಸ್ಥಾನ ಅಲಂಕರಿಸುವ ಅರ್ಹತೆ ತನಗಿದೆ ಎಂದು ಮಾಯಾವತಿ ಹೇಳಿದರು.

ಅಭಿವೃದ್ಧಿ ಕಾರ್ಯದಲ್ಲಿ ಉತ್ತರ ಪ್ರದೇಶದ ಮುಖವನ್ನು ಬದಲಾಯಿಸಿದ್ದು ಬಹುಜನ ಸಮಾಜ ಪಾರ್ಟಿ ಸರಕಾರವಾಗಿದೆ. ಲಕ್ನೊವನ್ನು ಅತ್ಯುತ್ತಮ ನಗರದ ಮಟ್ಟಕ್ಕೆ ನವೀಕರಿಸಿತು. ಇಂತಹ ಕೆಲಸಗಳನ್ನು ಹೋಲಿಸಿ ನೋಡುವಾಗ ತನಗೆ ಮೋದಿಗಿಂತ ಹೆಚ್ಚಿನ ಅರ್ಹತೆ ಇದೆ ಎಂದು ಮಾಯಾವತಿ ಹೇಳಿದ್ದಾರೆ. ತಾನು ನಾಲ್ಕು ಬಾರಿ ಮುಖ್ಯಮಂತ್ರಿ ಯಾಗಿದ್ದಾಗಲೂ ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ನೆಲೆಯೂರಿಸಲು ಸಾಧ್ಯವಾಗಿದೆ. ಆದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೋಮುಗಲಭೆ ಯುಂಟಾಯಿತು. ಅದು ದೇಶದ ಇತಿಹಾಸಕ್ಕೆ ಕಳಂಕವಾಗಿದೆ ಎಂದು ಮಾಯಾವತಿ ಆರೋಪಿಸಿದರು. ಸರಕಾರದ ಸ್ಥಾನವನ್ನು ವಹಿಸುವಲ್ಲಿ ಮೋದಿ ವಿಫಲರಾದರು. ಗುಜರಾತಿನಲ್ಲಿ ರಾಜಧರ್ಮ ಪಾಲಿಸಲಿಲ್ಲ. ಮೋದಿಗೆ ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗುವ ಯೋಗ್ಯತೆಯಿಲ್ಲ ಎಂದು ಮಾಯಾವತಿ ಹೇಳಿದರು.

LEAVE A REPLY

Please enter your comment!
Please enter your name here