ತಮಿಳರಿಂದ ಈ ಸಲವೂ ‘ಗೋ ಬ್ಯಾಕ್ ಫ್ಯಾಶಿಸ್ಟ್ ಮೋದಿ’ ಅಭಿಯಾನ; ಟ್ವಿಟರ್‌ನಲ್ಲಿ ಟ್ರೆಂಡಿಂಗ್

0
734

ಸನ್ಮಾರ್ಗ ವಾರ್ತೆ

ಚೆನ್ನೈ: ಪ್ರಧಾನಿ ಮೋದಿಯವರು ತಮಿಳ್ನಾಡಿಗೆ ಭೇಟಿ ಕೊಡುವ ಮುಂಚಿತವಾಗಿ ಟ್ವಿಟರ್‌ನಲ್ಲಿ ಪುನಃ ಪ್ರತಿಭಟನೆ ಗರಿಕೆದರಿದ್ದು ಕಳೆದ ಸಲ ‘ಗೋ ಬ್ಯಾಕ್ ಮೋದಿ’ ಘೋಷಣೆ ಟ್ರಂಡ್ ಆಗಿತ್ತು. ಆದರೆ ಈ ಬಾರಿ ‘ಗೋ ಬ್ಯಾಕ್ ಫ್ಯಾಶಿಸ್ಟ್ ಮೋದಿ’ ಎಂಬ ಹ್ಯಾಷ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಮೋದಿಯವರು ತಮಿಳ್ನಾಡಿಗೆ ಬರುವಾಗಲೆಲ್ಲ ಎಲ್ಲ ಸಂದರ್ಭದಲ್ಲಿಯೂ ‘ಗೋ ಬ್ಯಾಕ್ ಮೋದಿ’ ಹ್ಯಾಶ್‍ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿತ್ತು. ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರು ತಮಿಳುನಾಡು ಹಾಗೂ ಕೇರಳ ಭೇಟಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ‘ಗೋ ಬ್ಯಾಕ್ ಮೋದಿ’ ಹ್ಯಾಶ್ ಟ್ಯಾಗ್ ಟ್ವಿಟರ್‌ನಲ್ಲಿ ಟ್ರಂಡ್ ಆಗಿತ್ತು.

ನಿರುದ್ಯೋಗ ದರ ಹೆಚ್ಚಳ, ಇಂಧನ ಬೆಲೆ ಏರಿಕೆ, ಅಡುಗೆ ಅನಿಲ ದರ ಹೆಚ್ಚಳ, ರೈತ ಹೋರಾಟ ಎತ್ತಿ ತೋರಿಸಿ ಟ್ವಿಟರ್‌ನಲ್ಲಿ ಮೋದಿ ವಿರುದ್ಧ ಪ್ರತಿಭಟನೆ ಬಣ್ಣ ಪಡೆದುಕೊಂಡಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಿಎಂ ಮೋದಿ ತಮಿಳುನಾಡಿಗೆ ಒಂದರ ಮೇಲೊಂದರಂತೆ ಸಂದರ್ಶನ ನೀಡುತ್ತಿದ್ದಾರೆ. ಪುದುಚೇರಿ, ತಮಿಳುನಾಡಿನ ವಿವಿಧ ಅಭಿವೃದ್ಧಿ ಯೋಜನೆಗೆ ಶಂಕುಸ್ಥಾಪನೆ ಮಾಡಲು ಗುರುವಾರ ಮೋದಿ ಆಗಮಿಸಲಿದ್ದಾರೆ. ಪುದಚೇರಿಯಲ್ಲಿನ ಕಾರ್ಯಕ್ರಮದ ಬಳಿಕ ಅವರು ಕೋಯಮತ್ತೂರಿಗೆ ತೆರಳಲಿದ್ದಾರೆ. ಹಾಗೂ ಕೋಯಮತ್ತೂರಿನಲ್ಲಿ 12,400 ಕೋಟಿ ರೂಪಾಯಿಯ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.