ಮೋಹನ್ ಭಾಗ್ವತ್ ರನ್ನು ಭೇಟಿಯಾದ ವಿಶ್ವ ವಿದ್ಯಾನಿಲಯದ ಉಪಕುಲಪತಿಗಳು: ಶಿಕ್ಷಣದ ಕೇಸರೀಕರಣ ಎಂದ ಕಾಂಗ್ರೆಸ್

0
366

ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್ ನಡೆಸಿದ ನಾಲ್ಕು ದಿನಗಳ ಸಂಪರ್ಕ ಸಭೆಯ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನೆತ್ತಿದ್ದು, ವಿವಾದವನ್ನು ಹುಟ್ಟುಹಾಕಿದೆ.

ವಿಶ್ವ ವಿದ್ಯಾನಿಲಯಗಳ ಉಪಕುಲಪತಿಗಳು ಮತ್ತು ಕಾಲೇಜು ಪ್ರಾಂಶುಪಾಲರು ಅವರನ್ನು ಭೇಟಿಯಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇದು ಉತ್ತರಾಖಂಡ ಬಿಜೆಪಿ ಸರಕಾರವು ಶಿಕ್ಷಣವನ್ನು ಕೇಸರೀಕರಣಗೊಳಿಸುತ್ತಿರುವುದಕ್ಕೆ ಪುರಾವೆಯಾಗಿದೆಯೆಂದು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಟೀಕಿಸಿದ್ದಾರೆ.

ಅಲ್ಲದೆ ರಾಜ್ಯಸರ್ಕಾರದ ವಿವಿಧ ಪ್ರಮುಖ ಸಂಸ್ಥೆಗಳಲ್ಲಿ ಮುಖ್ಯ ಕಾರ್ಯ ದರ್ಶಿಗಳಾಗಿರುವ ಕನಿಷ್ಠ ನಾಲ್ಕು ಮಂದಿ ಭಾಗವತರನ್ನು ಭೇಟಿಯಾಗಿರುವುದಕ್ಕೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.