ಪೌರತ್ವ ತಿದ್ದುಪಡಿ ಮಸೂದೆ: ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನ ಕದ ಬಡಿದ ಸಂಸದೆ

0
1137

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಡಿ. 13: ಪೌರತ್ವ ತಿದ್ದುಪಡಿ ಮಸೂದೆ ಸಿಂಧುತ್ವವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ತುರ್ತಾಗಿ ಪರಿಗಣಿಸಬೇಕೆಂದು ಸಂಸದೆಯ ಬೇಡಿಕೆಯನ್ನು ಸುಪ್ರೀಂಕೋರ್ಟು ತಿರಸ್ಕರಿಸಿದೆ.

ಚೀಫ್ ಜಸ್ಟಿಸ್ ಎಸೈ ಬೊಬ್ಡೆ ಮತ್ತು ಬಿ ಆರ್ ಗವಾಯಿ, ಸೂರ್ಯ ಕಂದ್‍ರನ್ನೊಳಗೊಂಡ ಪೀಠ ತುರ್ತು ಪರಿಗಣನೆಯ ಬೇಡಿಕೆಯನ್ನು ತಿರಸ್ಕರಿಸಿತು. ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಮುಸ್ಲಿಂ ಲೀಗ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದೆ. ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕುವ ಮೊದಲು ಮುಸ್ಲಿಂ ಲೀಗ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು.