ಹಣಕ್ಕಾಗಿ ಪೀಡನೆ: ಗಾಂಜಾ ವ್ಯಸನಿ ಮಗನನ್ನು ಕೊಲೆಗೈದ ತಾಯಿ

0
426

ಸನ್ಮಾರ್ಗ ವಾರ್ತೆ

ವಿಜಯವಾಡ,ಫೆ.8: ಗಾಂಜಾ ವ್ಯಸನಿಯಾದ ೧7 ವರ್ಷದ ಮಗನನ್ನು ತಾಯಿಯೇ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ಐಟಿ ಅಗ್ರಾಹಾರದಲ್ಲಿ ನಡೆದಿದೆ. 17 ವರ್ಷದ ವಲ್ಲೆಪ್ ಸಿದ್ಧಾರ್ಥ ಕೊಲೆಯಾದ ವ್ಯಕ್ತಿ. ಗುತ್ತೆ ಆಧಾರದಲ್ಲಿ ತಾಯಿ ಸುಮಲತಾ(43) ಮುನ್ಸಿಪಲ್ ಕಾರ್ಪೊರೇಷನ್‍ನಲ್ಲಿ ದುಡಿಯುತ್ತಿದ್ದರು.

ಪತಿಯ ಸಾವಿನ ಬಳಿಕ ಐಟಿ ಆಗ್ರಾಹಾರದಲ್ಲಿ ಬಾಡಿಗೆ ಮನೆಯಲ್ಲಿ ಎರಡು ತಿಂಗಳಿಂದ ತಾಯಿ-ಮಗ ವಾಸಿಸುತ್ತಿದ್ದಾರೆ. ಕಲಿಕೆಯನ್ನು ಅರ್ಧದಲ್ಲೇ ನಿಲ್ಲಿಸಿದ ಸಿದ್ಧಾರ್ಥ ಗಾಂಜಾ ವ್ಯಸನಿಯಾಗಿದ್ದ. ಗಾಂಜಾ ಖರೀದಿಸಲು ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ.

ಶನಿವಾರ ತಾಯಿ ಮಗನ ನಡುವೆ ಎಂದಿನಂತೆ ಜಗಳ ಆಗಿತ್ತು. ನಂತರ ಸುಮಲತಾ ಮನೆಯಿಂದ ಹೊರಟು ಹೋಗಿದ್ದರು. ಸಂದೇಹಗೊಂಡ ನೆರೆಮನೆಯವರು ಮನೆಗೆ ಹೋದಾಗ ಸಿದ್ಧಾರ್ಥ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸುಮಲತಾರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದು ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.