ಕೊರೋನ: ಮುಖಕ್ಕೆ ಬಟ್ಟೆ ಸುತ್ತಿಕೊಂಡು ಓಡಾಡಿದ ಕೋತಿ ವಿಡಿಯೋ ವೈರಲ್

0
438

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜು.8: ಕೊರೋನ ಭೀತಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ವಕ್ಕರಿಸಿದಂತಿದೆ. ಕೋತಿಯೊಂದು ಮಾಸ್ಕ್ ಧರಿಸಿದ ವೀಡಿಯೊ ಇದೀಗ ವೈರಲ್ ಆಗುತ್ತಿದೆ. ದಾರಿ ಬದಿಯಲ್ಲಿ ಇರುವ ಕೋತಿಗಳಲ್ಲಿ ಒಂದು ಕೋತಿಯು ನೆಲದಲ್ಲಿದ್ದ ಬಟ್ಟೆಯನ್ನು ಮುಖಕ್ಕೆ ಕಟ್ಟಿ ನಡೆದಾಡುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದುಕೊಂಡಿದೆ.

ನೆಲೆದಲ್ಲಿದ್ದ ಬಟ್ಟೆ ತುಂಡನ್ನು ಮುಖಕ್ಕೆ ಹಾಕಿ ಕೋತಿ ಸ್ವಲ್ಪ ನಡೆದಾಡಿದ ವೀಡಿಯೊವನ್ನು ಇಂಡಿಯನ್ ಫಾರಸ್ಟ್ ಸರ್ವೀಸ್ ಅಧಿಕಾರಿ ಸುಶಾಂತ ಸಿಂಗ್‍ರ ಟ್ವೀಟರ್‌ನಲ್ಲಿ ನೋಡಬಹುದು. ತಲೆಗೆ ಕಟ್ಟುವ ಸ್ಕಾರ್ಪನ್ನು ಮಾಸ್ಕ್ ಆಗಿ ಉಪಯೋಗಿಸಿದೆ. ಎಂದು ವೀಡಿಯೊವನ್ನು ಅವರು ಹಂಚಿಕೊಂಡಿದ್ದು, ವೀಡಿಯೊ ಹೆಚ್ಚು ಶೇರ್ ಆಗಿದೆ.

ಮಾಸ್ಕ್ ಧರಿಸದಿರುವವರಿಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ತೊಡಗಿದ ಮೇಲೆ ಕೋತಿಯೂ ಕಾನೂನು ಪಾಲಿಸಲು ಶ್ರಮಿಸುತ್ತಿದೆ ಎಂದು ವೀಡಿಯೊ ಶೇರ್ ಮಾಡಿದ ಒಬ್ಬರು ಬರೆದುಕೊಂಡಿದ್ದಾರೆ.

ಕೊರೊನ ವ್ಯಾಪಿಸುವುದು ತೀವ್ರಗೊಂಡದ್ದರಿಂದ ಸಾರ್ವಜನಿಕ ಸ್ಥಳಗಳಿಗೆ ಬರುವಾಗ ಮಾಸ್ಕ್ ಕಡ್ಡಾಯ ಧರಿಸಬೇಕೆಂದು ಸರಕಾರದ ಆದೇಶವಿದೆ. ಕ್ರಮ ಜರುಗಲಾರಂಭವಾದ ಬಳಿಕ ಮಾಸ್ಕ್ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ.

ಓದುಗರೇ, ಸನ್ಮಾರ್ಗ ಪೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.