ಮೊನ್ನೆ ವಿತ್ತ ಸಚಿವ, ನಿನ್ನೆ ಕಾನೂನು ಸಚಿವ, ಇವತ್ತು ಕೃಷಿ ಸಚಿವ; ಚೌಕಿದಾರರೇ ಏನಿದು ತಮಾಷೆ?

0
2396

ಏ ಕೆ ಕುಕ್ಕಿಲ

ರಫೇಲ್ ಒಪ್ಪಂದದ A ಟು Z ಗೊತ್ತಿರುವುದು ಪ್ರಧಾನಿ ನರೇಂದ್ರ ಮೋದಿಯವರಿಗೆ. ಫ್ರಾನ್ಸ್ ನ ಅಂದಿನ ಅಧ್ಯಕ್ಷ ಹೊಲ್ಲಾಂಡೆಯವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಾಗ ಅವರ ಜೊತೆ ರಕ್ಷಣಾ ಸಚಿವರಾಗಲಿ, ವಿತ್ತ ಸಚಿವರಾಗಲಿ ಅಥವಾ ಕೃಷಿ ಸಚಿವರಾಗಲಿ ಯಾರೂ ಇರಲಿಲ್ಲ. ಆದ್ದರಿಂದ ಸರಕಾರೀ ಸ್ವಾಮ್ಯದ HAL ಅನ್ನು ಕೈಬಿಟ್ಟದ್ದೇಕೆ, ಅನನುಭವಿ ರಿಲಯನ್ಸ್ ಡಿಫೆನ್ಸ್ ಸಂಸ್ಥೆಯು ಈ ಬೃಹತ್ ಒಪ್ಪಂದದ ಒಳಗೆ ನುಸುಳಿದ್ದು ಹೇಗೆ, ಇದರಲ್ಲಿ ಫ್ರಾನ್ಸ್ ನ ದಸಲ್ಟ್ ಕಂಪನಿಯ ಪಾತ್ರ ಏನು, ಪ್ರಧಾನಿಯಾಗಿ ತನ್ನ ಪಾತ್ರ ಏನು, ಫ್ರಾನ್ಸ್ ಸರಕಾರದ ಪಾಲು ಏನು… ಇತ್ಯಾದಿಗಳನ್ನೆಲ್ಲ ವಿವರಿಸಬೇಕಾಗಿರುವುದು ಸ್ವತಃ ಮೋದಿಯವರೇ ಹೊರತು ಇನ್ನಾರಲ್ಲ. ತಮಾಷೆ ಏನೆಂದರೆ,

ಇವತ್ತು ಮೋದಿಯವರು ಮಾತಾಡುತ್ತಲೇ ಇಲ್ಲ. ಮತ್ತು ಮಾತಾಡ್ತಾ ಇರೋರು ಯಾರು ಅಂದರೆ, ಈ ಒಪ್ಪಂದದ ಜೊತೆ ಬಿಡಿ, ರಕ್ಷಣಾ ಇಲಾಖೆಯ ಜೊತೆ ಯಾವ ಸಂಬಂಧವೂ ಇಲ್ಲದ ಸಚಿವರುಗಳು. ಇವತ್ತು ಕೇಂದ್ರ ಕೃಷಿ ಸಚಿವ ಗಜೇಂದ್ರ ಶೇಖಾವತ್ ಅವರು ರಫೇಲ್ ಬಗ್ಗೆ ಸಮರ್ಥನೆಗಿಳಿದಿದ್ದಾರೆ. ಮೊನ್ನೆ ವಿತ್ತ ಸಚಿವ ಅರುಣ್ ಜೇಟ್ಲಿ, ನಿನ್ನೆ ಕಾನೂನು ಸಚಿವ ರವಿಶಂಕರ್ ಪ್ರಸಾದ್. ನಾಳೆ ಕ್ರೀಡಾ ಸಚಿವರೋ ಸಂಸ್ಕೃತಿ ಸಚಿವರೋ ರಫೇಲ್ ನ ವಿಷಯದಲ್ಲಿ ಮಾತಾಡಲೂ ಬಹುದು.

ಇಂಥದ್ದೊಂದು ಉಡಾಫೆಯ ಸರಕಾರವನ್ನು ಈ ದೇಶ ಈವರೆಗೂ ಕಂಡಿರಲಿಲ್ಲ.