ಕೇರಳಕ್ಕೆ ಮಳೆಯ ಆಗಮನ: ಕರ್ನಾಟಕ ಕರಾವಳಿಯಲ್ಲೂ ಗಾಳಿ ಮಳೆ ಸಂಭವ

0
624

ತಿರುವನಂತಪುರಂ,ಜೂ.7: ಕೇರಳಕ್ಕೆ ಒಂದು ವಾರ ತಡವಾಗಿ ಮಳೆ ಆಗಮಿಸಿದೆ ಎಂದು ಕೇಂದ್ರ ಹವಾಮಾನ ನಿರೀಕ್ಷಣಾಲಯ ತಿಳಿಸಿದೆ. ಶನಿವಾರದಿಂದ ಮಾನ್ಸೂನ್ ಮಾರುತ ಆರಂಭವಾಗಿದ್ದು ಕಳೆದ ದಿವಸ ರಾತ್ರೆಯಿಂದ ಕೇರಳದ ಹಲವು ಜಿಲ್ಲೆಯಲ್ಲಿ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡವೂ ಆಗಿದೆ. ಆದ್ದರಿಂದ ಬಲವಾದ ಮಳೆ ಆಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಮಾನ ನಿರೀಕ್ಷಣಾಲಯ ಮುನ್ನೆಚ್ಚರಿಕೆ ನೀಡಿದೆ.

ಅರಬಿ ಸಮುದ್ರದ ನಿಮ್ನ ಒತ್ತಡ ರವಿವಾರದೊಂದಿಗೆ ಬಲಿಷ್ಠತೆಯನ್ನು ಪಡೆಯಬಹುದು. ಇದು ಕೇರಳ-ಕರ್ನಾಟಕ ಕರಾವಳಿಯಲ್ಲಿ ಗಾಳಿ-ಮಳೆ ಯಾಗಲಿದೆ ಎಂದು ಅದು ತಿಳಿಸಿದೆ. ಗಂಟೆಗೆ 35-45 ಕಿಲೊ ಮೀಟರ್ ವೇಗದಲ್ಲಿ ಗಾಳಿ ಬೀಸಬಹುದು. ಲಕ್ಷದ್ವೀಪ, ಮಾಲದ್ವೀಪಗಳಿಗೆ ಮೀನುಗಾರಿಕೆಗೆ ತೆರಳಬಾರದೆಂದು ಹವಮಾನ ನಿರೀಕ್ಷಣಾಲಯವು ಮುನ್ನೆಚ್ಚರಿಕೆ ನೀಡಿದೆ.