ಮೂರನೇ ಪಾಣಿಪತ್ ಕದನ: ಅಮಿತ್ ಶಾರ ಮಾತಿನ ಅರ್ಥವೇನು?

0
1949

ಏ ಕೆ ಕುಕ್ಕಿಲ

ಮೂರನೇ ಪಾಣಿಪತ್ ಕದನ ನಡೆದಿರುವುದು ಅಫಘಾನ್ ದೊರೆ ಅಹ್ಮದ್ ಶಾ ಅಬ್ದಾಲಿ ಮತ್ತು ಮರಾಠಾ ಪೇಶ್ವೆಗಳ ನಡುವೆ. ಮರಾಠಾ ದೊರೆಗಳ ದೌರ್ಜನ್ಯ, ಕ್ರೂರ ವರ್ತನೆಗೆ ಬೇಸತ್ತು ಅವರ ಮಿತ್ರರೇ ಅವರಿಗೆ ಈ ಯುದ್ಧದ ಸಂದರ್ಭದಲ್ಲಿ ತಿರುಗಿ ನಿಂತರು. ಸಿಖ್ಖರು, ಜಾಟರು, ಅವಧ್ ಸಂಸ್ಥಾನದ ದೊರೆ, ರಜಪೂತರೆಲ್ಲ ಮರಾಠರಿಗೆ ಅಸಹಕಾರ ತೋರಿದುದರಿಂದ 1761 ರಲ್ಲಿ ಅಬ್ದಾಲಿಗೆ ಮರಾಠರನ್ನು ಸೋಲಿಸುವುದಕ್ಕೆ ಸಾಧ್ಯವಾಯಿತು. ಹೀಗಿರುವಾಗ, ಮುಂದಿನ ಲೋಕ ಸಭಾ ಚುನಾವಣೆಯನ್ನು ಮೂರನೇ ಪಾಣಿಪತ್ ಯುದ್ಧಕ್ಕೆ ಅಮಿತ್ ಶಾ ಹೋಲಿಸುತ್ತಾರೆಂದರೆ ಏನರ್ಥ? ಈ ಚುನಾವಣೆಯನ್ನು ಹಿಂದೂ ಮತ್ತು ಮುಸ್ಲಿಮರ ನಡುವಿನ ಸಮರ ಎಂದು ಬಿಂಬಿಸುವುದು ಅವರ ಉದ್ದೇಶವೇ? ಚುನಾವಣಾ ಆಯೋಗ ಎಲ್ಲಿದೆ? ಅದರ ನಿಯಮಗಳು ಇಂಥ ಮಾತುಗಳನ್ನು ಒಪ್ಪುತ್ತದೆಯೇ? ಅಥವಾ ಮಿತ್ರಪಕ್ಷಗಳು ಒಂದೊಂದಾಗಿ ತನ್ನ ಮೈತ್ರಿಕೂಟವನ್ನು ತೊರೆಯುತ್ತಿರುವುದರಿಂದಾಗಿ (ಜಾಟರು, ರಜಪೂತರು ಇತ್ಯಾದಿಗಳು ಮರಾಠರನ್ನು ತೊರೆದಂತೆ) ತನ್ನ ಸೋಲು ಖಚಿತ ಎಂಬ ಪರೋಕ್ಷ ಸೂಚನೆಯನ್ನು ಅವರು ನೀಡುತ್ತಿದ್ದಾರೆಯೇ? ನಿಜವಾಗಿ ಅವರಿಗೆ ಹಿಂದೂ ಮುಸ್ಲಿಂ ವಿಭಜನೆ ಬೇಕಾಗಿದೆ. ನಾವು ಪೇಶ್ವೆಗಳು ಮತ್ತು ಉಳಿದವರು ಮುಸ್ಲಿಮರು ಎಂಬ ಸಂದೇಶವನ್ನು ಸಾರಬೇಕಾಗಿದೆ.

ಹಿಂದುಗಡೆ ಕೈಕಟ್ಟಿ, ಬಾಯ್ಮುಚ್ಚಿ, ಆಘಾತಗೊಂಡವರಂತೆ ಕುಳಿತಿರುವ ಅಡ್ವಾಣಿಯವರ ಭಂಗಿಯೇ ಸದ್ಯದ ಬಿಜೆಪಿಯ ಸ್ಥಿತಿಗೆ ಅನ್ವರ್ಥದಂತಿದೆ.