ಟರ್ಕಿಯ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದ ಅಮೆರಿಕ!

0
513

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಅ.17: ಸಿರಿಯದಲ್ಲಿ ಕುರ್ದ್‌ಗಳ ವಿರುದ್ಧ ದಾಳಿಯಿಂದ ಹಿಂದೆ ಸರಿಯದಿದ್ದರೆ ಟರ್ಕಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.

ಮಧ್ಯಸ್ಥಿಕೆ ಚರ್ಚೆಗೆ ಅಮೆರಿಕ ಉಪಾಧ್ಯಕ್ಷ ಮೈಕ್ ಮಿನ್ ನೇತೃತ್ವದ ತಂಡ ಇಂದು ಟರ್ಕಿಗೆ ಬರುತ್ತಿದೆ. ರಾಷ್ಟ್ರೀಯ ಸುರಕ್ಷೆ ಸಲಹೆಗಾರ ರಾಬರ್ಟ್ ಒಬ್ರಿಯನ್ ಜೊತೆ ಇದ್ದಾರೆ. ಇದೇ ವೇಳೆ ಸಿರಿಯದ ಐಎಸ್ ವಿರುದ್ಧ ಹೋರಾಟದಲ್ಲಿ ಕುರ್ದ್‌ಗಳಿಗೆ ಸಹಾಯ ನೀಡುತ್ತಿದ್ದ ಅಮೆರಿಕ ಸೇನೆಯನ್ನು ವಾಪಸು ಕಳುಹಿಸಲಾಗುವುದು ಎಂದು ಟ್ರಂಪ್ ಪುನರುಚ್ಚರಿಸಿದರು.

ಕಳೆದ ದಿವಸ ಟ್ರಂಪ್ ಸರಕಾರ ಟರ್ಕಿಗೆ ಆರ್ಥಿಕ ದಿಗ್ಬಂಧನ ಘೋಷಿಸಿದ್ದರು. ಆದರೆ ಟರ್ಕಿ ಅದನ್ನು ತಲೆಗೆ ಹಚ್ಚಿಕೊಂಡಿಲ್ಲ. ಕುರ್ದಿಯರನ್ನು ಅಲ್ಲಿಂದ ತೆರವುಗೊಳಿಸದೆ ದಾಳಿ ನಿಲ್ಲಿಸುವುದಿಲ್ಲ ಎಂದು ಟರ್ಕಿ ಘೋಷಿಸಿದೆ.

ಈ ನಡುವೆ ಸೈನಿಕ ಕಾರ್ಯಾಚರಣೆಯನ್ನು ಟೀಕಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕಿದ 200ರಷ್ಟು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 24 ಮಂದಿಯ ಬಂಧನವಾಗಿದೆ.78 ಮಂದಿಯನ್ನು ಬಿಟ್ಟು ಕಳುಹಿಸಲಾಗಿದೆ. 40 ಮಂದಿಯ ಮೇಲೆ ನಿಗಾ ಇರಿಸಲಾಗಿದೆ.