ಮುಂಬೈಯಲ್ಲಿ 611 ಕೊರೊನಾ ಪ್ರಕರಣಗಳು; ಉದ್ಧವ್ ಠಾಕರೆ ಮನೆ ಸಮೀಪ ಮುಚ್ಚುಗಡೆ

0
887

ಸನ್ಮಾರ್ಗ ವಾರ್ತೆ

ಮುಂಬೈ, ಎ. 7: ಮುಂಬೈ ನಗರದಲ್ಲಿ ಇದುವರೆಗೆ 611 ಮಂದಿಗೆ ಕೊರೊನಾ ದೃಢಪಟ್ಟಿದ್ದು ಇದುವರೆಗೆ 52 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 890 ಮಂದಿಗೆ ಕೊರೊನಾ ಇದೆ. ಮುಖ್ಯಮಂತ್ರಿ ಉದ್ಧವ್ ಠಾಕರೆ ಮನೆ ಬಾಂದ್ರಾದ ಮಾತೊಶ್ರೀ ಸಮೀಪ ಪ್ರದೇಶವನ್ನು ಕೊರೊನಾ ಹರಡುವಿಕೆಯ ಸ್ಥಳವಾಗಿ ಘೋಷಿಸಲಾಗಿದೆ. ರಸ್ತೆಗಳನ್ನು ಮುಚ್ಚಲಾಗಿದೆ. ಕೊರೊನಾ ಹರಡುವಿಕೆಯ ವಲಯ ಎಂದು ಪೋಸ್ಟರ್ ಗಳನ್ನು ಅಂಟಿಸಲಾಗಿದೆ. ಏಷ್ಯದಲ್ಲಿ ಅತ್ಯಂತ ದೊಡ್ಡ ಕೊಳೆಗೇರಿ ಇರುವ ಧಾರಾವಿಯಲ್ಲಿ ಇನ್ನೂ ಇಬ್ಬರಿಗೂ ರೋಗ ದೃಢಪಟ್ಟಿದೆ. ನಂತರ ಬಲಿಯ ನಗರವನ್ನು ಸಂಪೂರ್ಣವನ್ನು ಮುಚ್ಚಲಾಗಿದೆ.

ಧಾರಾವಿಯಲ್ಲಿ ಏಳುಮಂದಿಗೆ ಕೊರೊನಾ ದೃಢಪಟ್ಟಿದೆ. ಮುಂಬೈಯಲ್ಲಿ 40ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೊರೊನಾ ಕಂಡು ಬಂದ ಹಿನ್ನೆಲೆಯಲ್ಲಿ ಜಸ್‍ಲೋಕ್ ಆಸ್ಪತ್ರೆ ಮತ್ತು ವೋಕ್‍ಹಾರ್ಟ್ ಆಸ್ಪತ್ರೆಯನ್ನು ಮುಚ್ಚಲಾಗಿತ್ತು. ಪುಣೆ ಡಿವೈ ಪಾಟೀಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಓರ್ವನಿಗೆ ಕೊರೊನಾ ದೃಢಪಟ್ಟದ್ದು ಸಹಿತ 92 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಮಹಾರಾಷ್ಟ್ರದ ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚಿನ ಸುರಕ್ಷಾ ಉಪಕರಣಗಳನ್ನು ಒದಗಿಸಬೇಕೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.