ಸತ್ಯವಿಶ್ವಾಸಿಗಳಲ್ಲಿ ಕೆಲವರಿದ್ದಾರೆ, ಅಲ್ಲಾಹನೊಂದಿಗೆ ಕರಾರು ಮಾಡಿದ ವಿಷಯದಲ್ಲಿ ಅವರು ಸತ್ಯಸಂಧರು- ಮುರ್ಸಿ ನಿಧನಕ್ಕೆ ಸಂತಾಪ ಸೂಚಿಸುತ್ತಾ ಕುರ್ ಆನ್ ವಚನ ಉಲ್ಲೇಖಿಸಿದ ಶೇಖ್ ಯೂಸುಫುಲ್ ಕರ್ಝಾವಿ

0
744

ದೋಹ, ಜೂ.18: ಸರಕಾರಿ ಭಯೋತ್ಪಾದನೆಯಿಂದಾಗಿ ಹುತಾತ್ಮರಾದ ಈಜಿಪ್ಟ್ ಮಾಜಿ ಅಧ್ಯಕ್ಷ ಮುಹಮ್ಮದ್ ಮುರ್ಸಿಗೆ ವಿಶ್ವ ಮುಸ್ಲಿಂ ವಿದ್ವಾಂಸ ಸಭೆಯ ಮಾಜಿ ಅಧ್ಯಕ್ಷ ಶೇಖ್ ಯೂಸುಫುಲ್ ಕರ್ಝಾವಿ ಸಂತಾಪ ಸೂಚಿಸಿದ್ದಾರೆ. ‘ ಸತ್ಯವಿಶ್ವಾಸಿಗಳಲ್ಲಿ ಕೆಲವರಿದ್ದಾರೆ. ಅಲ್ಲಾಹನೊಂದಿಗೆ ಕರಾರು ಮಾಡಿದ ವಿಷಯದಲ್ಲಿ ಅವರು ಸತ್ಯಸಂಧ್ಯರು’ ಎಂಬ ಪವಿತ್ರ ಕುರ್‍ಆನ್ ಸೂಕ್ತದ ಟಿಪ್ಪಣಿಯೊಂದಿಗೆ ಕರ್ಝಾವಿ ಟ್ವಿಟರ್ ಮತ್ತು ಫೇಸ್‍ಬುಕ್‍ನಲ್ಲಿ ಸಂತಾಪ ಸೂಚಿಸಿ ಪೋಸ್ಟ್ ಹಾಕಿದ್ದಾರೆ.
ಅಲ್ಲಾಹನು ಅವರನ್ನು ಕ್ಷಮಿಸಲಿ, ಹುತಾತ್ಮರ ಸಾಲಿಗೆ ಸೇರಿಸಲಿ ಎಂದು ಶೇಖ್ ಯೂಸುಫುಲ್ ಕರ್ಝಾವಿ ಪ್ರಾರ್ಥಿಸಿದ್ದಾರೆ. ವಿಶ್ವವಿದ್ವಾಂಸ ಸಭೆಯ ಅಧ್ಯಕ್ಷ ಅಹ್ಮದ್ ರೈಸೂನಿ, ಕಾರ್ಯದರ್ಶಿ ಅಲಿ ಕುರದಾಯಿ ಕೂಡ ಸಂತಾಪ ಸೂಚಿಸಿದ್ದಾರೆ.

ಪ್ರಜಾಪ್ರಭುತ್ವ ರೀತಿಯಲ್ಲಿ ಈಜಿಪ್ಟ್ ಅಧ್ಯಕ್ಷರಾಗಿ ಆಯ್ಕೆಯಾದ ಮುಹಮ್ಮದ್ ಮುರ್ಸಿ ಹುತಾತ್ಮರಾಗಿರುವ ಸುದ್ದಿ ಈಜಿಪ್ಟ್ ಮತ್ತು ಜಗತ್ತಿನ ಎಲ್ಲ ಮುಸ್ಲಿಮರಿಗೆ ನೋವು ತರಿಸುವಂತಹದ್ದಾಗಿದೆ. ಅಲ್ಲಾಹನ ಮಾರ್ಗದಲ್ಲಿ ಉನ್ನತವಾದ ಹುತಾತ್ಮತೆಯನ್ನು ಅವರು ಗಳಿಸಿಕೊಂಡರು. ಅನ್ಯಾಯವಾಗಿ ಜೈಲಿಗೆ ಹಾಕಿ ದೌರ್ಜನ್ಯವೆಸಗಿದ ಸೇನೆ ಇದಕ್ಕೆ ಹೊಣೆಯಾಗಿದೆ. ವಿದ್ವಾಂಸ ಸಭೆಯು ಇವೆಲ್ಲವನ್ನೂ ಅಲ್ಲಾಹನೆಡೆಗೆ ಮರಳಿಸುತ್ತದೆ. ಅವರು ಪ್ರಾರ್ಥಿಸುವ ವಿಷಯದ ಕುರಿತು ಅಲ್ಲಾಹನು ಅಶ್ರದ್ಧನಲ್ಲ ಎಂದು ವಿಶ್ವ ವಿದ್ವಾಂಸ ಸಭೆ ಮುರ್ಸಿ ನಿಧನಕ್ಕೆ ಸಂತಾಪ ಸೂಚಿಸಿದೆ. ವಿಶ್ವ ವಿದ್ವಾಂಸ ಸಭೆಯ ಅಧ್ಯಕ್ಷ ಅಹ್ಮದ್ ರೈಸೂನಿ, ಕಾರ್ಯದರ್ಶಿ ಅಲಿ ಕುರದಾಯಿ ಜಂಟಿಯಾಗಿ ಹೇಳಿಕೆ ಹೊರಡಿಸಿ ಸಂತಾಪ ಸೂಚಿಸಿದರು.