ಮುಸ್ಲಿಂ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯ- ಉಪನ್ಯಾಸ

0
761

ತೊಕ್ಕೊಟ್ಟು: ಇಲ್ಲಿನ ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜಿನ ಭಾಷಾ ವಿಭಾಗದ ವತಿಯಿಂದ ವಿದ್ಯಾರ್ಥಿನಿಯರಿಗಾಗಿ ಉನ್ನತ ಶಿಕ್ಷಣದ ಮಹತ್ವ ಎಂಬ ವಿಷಯದ ಕುರಿತು ಉಪನ್ಯಾಸವನ್ನು ಏರ್ಪಡಿಸಲಾಯಿತು. ಮಂಗಳೂರಿನ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ. ಉಮ್ಮಪ್ಪ ಪೂಜಾರಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ, ಉನ್ನತ ಶಿಕ್ಷಣವು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರಸ್ತುತ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಭಾರತಿ ಎಂ.ಆರ್., ಭಾಷಾ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಎಲಿಜಾ ಫೆರಾವೊ, ಶ್ರೀಮತಿ ಹರ್ಷ ಕೆ.ಪಿ., ಶ್ರೀಮತಿ ಪ್ರಮೀಳ ಕೆ. ಹಾಗೂ ಇತರ ಉಪನ್ಯಾಸಕಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ಹಮ್‍ನಾಜ್ ಕಾರ್ಯಕ್ರಮ ನಿರೂಪಿಸಿದರು. ಕು. ಫಾತಿಮತುಲ್ ನಿಶ್ಮ ಕುರಾನ್ ಪಠಿಸಿದರು. ಕು. ಫಾತಿಮಾ ರಹೀಮ ಯು. ಸ್ವಾಗತಿಸಿದರು. ಕು. ಶೆಹಜಾದಿ ಪರ್ವೀನ್ ವಂದಿಸಿದರು.