ಅಮಾನಿ ಅಲ್ ಕತಾಬೆಯವರನ್ನು ಹೊರಹಾಕಿದ ಅಮೆರಿಕದ ಏರ್‌ಲೈನ್ ವಿಮಾನ: ಜನಾಂಗೀಯ ತಾರತಮ್ಯ ಆರೋಪ

0
1948

ಸನ್ಮಾರ್ಗ ವಾರ್ತೆ

ನ್ಯೂಯಾರ್ಕ್: ಅಮೆರಿಕದ ಏರ್‌ಲೈನ್ ವಿಮಾನದಿಂದ ಮುಸ್ಲಿಂ ಮಹಿಳೆಯನ್ನು ಹೊರಹಾಕಲಾಗಿದೆ. ವಿಮಾನದ ಫಸ್ಟ್ ಕ್ಲಾಸ್ ಪ್ರಯಾಣಿಕರಲೊಬ್ಬರು ಇವರಿರುವುದು ತನಗೆ ಕಷ್ಟವಾಗುತ್ತಿದೆ ಎಂದು ಹೇಳಿದ್ದಕ್ಕಾಗಿ ಅಧಿಕಾರಿಗಳು ತನ್ನನ್ನು ಹೊರಹಾಕಿದರೆಂದು ಅಮಾನಿ ಅಲ್ ಕತಾಬೆ ಹೇಳಿದರು. ಅಮಾನಿ ಆಕ್ಟವಿಸ್ಟ್ ಮತ್ತು ಬ್ಲಾಗರ್ ಆಗಿದ್ದು ನ್ಯೂಜರ್ಸಿಯಲ್ಲಿ ವಾಸವಿದ್ದಾರೆ.

ನ್ಯೂಯಾರ್ಕಿನಿಂದ ಶರ್ಲೆಟ್‍ಗೆ ಇವರು ಪ್ರಯಾಣಿಸುತ್ತಿದ್ದರು. ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಇವರೇ ಬಯಲುಗೊಳಿಸಿದ್ದು ತನ್ನ ವಿರುದ್ಧ ಜನಾಂಗಿಯ ತಾರತಮ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ತಾನು ಫಸ್ಟ್ ಕ್ಲಾಸ್ ಪ್ರಯಾಣಿಕನ ಆಕ್ಷೇಪಕ್ಕೆ ಒಳಗಾದೆ. ಆದರೂ ಅವರು ಆತನ ಮಾತಿಗೆ ಮಾತ್ರ ಬೆಲೆ ಕೊಟ್ಟರು. ಒಂದೋ ನನ್ನನ್ನು ಅಥವಾ ಇಬ್ಬರನ್ನು ವಿಮಾನದಿಂದ ಹೊರಗೆ ಹಾಕಬೇಕಾಗಿತ್ತು ಎಂದು ಅಮಾನಿ ಹೇಳಿದರು.

ಆರು ಗಂಟೆಗಳ ಕಾಲ ಅಮಾನಿ ಪೊಲೀಸರ ಕಸ್ಟಡಿಯಲ್ಲಿದ್ದರು. ಪ್ರಯಾಣ ತಡವಾಗಿದ್ದಕ್ಕೆ ಅಮಾನಿಯ ವಿರುದ್ಧ ತನಿಖೆಗೆ ಏರ್‌ಲೈನ್ ಆದೇಶ ಹೊರಡಿಸಿದೆ.