ಮುಸ್ಲಿಮರು ಇತರರಿಗಿಂತ ಹೆಚ್ಚು ದೇಶಪ್ರೇಮಿಗಳು: ಸಿಎಸ್‍ಡಿಎಸ್ ಸಮೀಕ್ಷೆ

0
1281

ಹೊಸದಿಲ್ಲಿ, ಜೂ.15: ಸಾಮಾಜಿಕ ಮಾಧ್ಯಮಗಳಲ್ಲಿ ಧರ್ಮ ಮತ್ತು ಪಾರ್ಟಿಯ ಬೆಂಬಲಿಗರು ಪರಸ್ಪರ ವಿರೋಧಿಸುತ್ತಿರುತ್ತಾರೆ. ಇತ್ತೀಚೆಗೆ ಬಹಿರಂಗವಾದ ಸಮೀಕ್ಷೆಯೊಂದು ಇವರನ್ನೆಲ್ಲ ಬೆಚ್ಚಿಬೀಳುವಂತೆ ಮಾಡಿದೆ. ಸಿಎಸ್‍ಡಿಎಸ್ ಸಮೀಕ್ಷೆಯಲ್ಲಿ ಬಹಿರಂಗವಾದ ಅಂಕಿ ಅಂಶಗಳ ಪ್ರಕಾರ ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವ ಶೇ. 19ರಷ್ಟು ಮಂದಿ ಮಾತ್ರ ಭಾರತ ಹಿಂದೂ ರಾಷ್ಟ್ರ ಎನ್ನುತ್ತಾರೆ. ಆದರೆ ಇಂಟರ್ ನೆಟ್ ಉಪಯೋಗಿಸದವರಲ್ಲಿ ಶೇ. 17ರಷ್ಟು ಮಂದಿ ಭಾರತ ಹಿಂದೂ ರಾಷ್ಟ್ರವಾಗಿದೆ ಎನ್ನುವ ಭಾವನೆ ಇದೆ. ಈ ಸಮೀಕ್ಷೆಯನ್ನು ಒಟ್ಟು 27 ರಾಜ್ಯಗಳಲ್ಲಿ ಎರಡು ತಿಂಗಳ ಅವಧಿಯಲ್ಲಿ ನಡೆಸಲಾಗಿತ್ತು.

ಇದೇವೇಳೆ ಸಾಮಾಜಿಕ ಮಾಧ್ಯಮ ಉಪಯೋಗಿಸುವ ಶೇ. 75ರಷ್ಟು ಮಂದಿ ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದೆ ಎಂದಿದ್ದಾರೆ. ಇಲ್ಲಿ ಎಲ್ಲ ಧರ್ಮದವರಿಗೆ ಸಮಾನ ಸ್ಥಾನಮಾನ ಇರಬೇಕು. ಇಂಟರ್‍ನೆಟ್ ಬಳಸದ ಶೇ. 73ರಷ್ಟು ಮಂದಿಯಲ್ಲಿ ಈ ಭಾವನೆ ಇದೆ.

ಇದೇ ಸಮೀಕ್ಷೆಯಲ್ಲಿ ಶೇ.30ಕ್ಕಿಂತ ಹೆಚ್ಚು ಮಂದಿ ಮುಸ್ಲಿಮರು ರಾಷ್ಟ್ರವಾದಿಗಳಾಗಿದ್ದಾರೆ ಎಂದು ಹೇಳಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ಅವರು ಸಿದ್ಧರಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಶೇ. 15ರಷ್ಟು ಮಂದಿ ಮುಸ್ಲಿಮರು ರಾಷ್ಟ್ರವಾದಿಯೆಂದು ಹೇಳಿಲ್ಲ. ಒಟ್ಟು ಸಮೀಕ್ಷೆಯ ಫಲಿತಾಂಶ ಪ್ರಕಾರ ದೇಶದಲ್ಲಿ ಈಗಲೂ ಜಾತ್ಯತೀತ ಮನೋಭಾವದ ಜನರು ಹೆಚ್ಚಿದ್ದಾರೆ. ಇವರು ಎಲ್ಲರಿಗೂ ಈ ದೇಶದಲ್ಲಿ ಸಮಾನಾವಕಾಶ ಇರಬೇಕು ಎನ್ನುತ್ತಾರೆ. ಸಂವಿಧಾನದಲ್ಲಿಯೂ ಇವರು ವಿಶ್ವಾಸ ಪ್ರಕಟಿಸಿದ್ದಾರೆ.