ಮುಸ್ಲಿಮರನ್ನು 1947ರಲ್ಲೇ ಪಾಕಿಸ್ತಾನಕ್ಕೆ ಕಳುಹಿಸಬೇಕಾಗಿತ್ತು- ಗಿರಿರಾಜ್ ಸಿಂಗ್

0
586

ಸನ್ಮಾರ್ಗ ವಾರ್ತೆ

ಪಾಟ್ನ, ಫೆ. 21: ಕೋಮು ಪ್ರಚೋದಕ ಹೇಳಿಕೆಗಾಗಿಯೇ ಗುರುತಿಸಿಕೊಂಡಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮತ್ತೊಮ್ಮೆ ಮುಸ್ಲಿಮರ ವಿರುದ್ಧ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ. 1947ರಲ್ಲಿ ಎಲ್ಲ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕಾಗಿತ್ತು ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.

” ದೇಶಕ್ಕಾಗಿ ಸ್ವಯಂ ಸಮರ್ಪಿಸಬೇಕಾದ ಸಮಯ ಇದು. 1947ಕ್ಕಿಂತ ಮೊದಲು ಜಿನ್ನ ಇಸ್ಲಾಮಿಕ್ ದೇಶಕ್ಕೆ ಮುಂದಾದರು. ನಮ್ಮ ಪೂರ್ವಜರು ಮಾಡಿದ ದೊಡ್ಡ ತಪ್ಪಿಗೆ ನಾವು ಬೆಲೆ ತೆರಬೇಕಾಯಿತು. ಅಂದು ಮುಸ್ಲಿಂ ಸಹೋದರರನ್ನು ಅಲ್ಲಿಗೆ ಕಳುಹಿಸಿ ಹಿಂದೂಗಳನ್ನು ಇಲ್ಲಿಗೆ ಕರೆತಂದಿದ್ದರೆ ನಮಗೆ ಈ ಅವಸ್ಥೆ ಎದುರಾಗುತ್ತಿರಲಿಲ್ಲ. ಬೇರೆ ದೇಶಗಳಲ್ಲಿರುವ ಭಾರತೀಯರಿಗೆ ಇಲ್ಲಿ ಆಶ್ರಯ ಸಿಗದಿದ್ದರೆ ಅವರು ಎಲ್ಲಿಗೆ ಹೋಗಬೇಕು?” ಎಂದು ಬುಧವಾರ ಬಿಹಾರಿನ ಪೂರ್ಣಿಯದಲ್ಲಿ ಮಾತಾಡುತ್ತಾ ಅವರು ಪ್ರಶ್ನಿಸಿದರು.

2015ಕ್ಕಿಂತ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಮುಸ್ಲಿಮೇತರ ನಿರಾಶ್ರಿತರಿಗೆ ಪೌರತ್ವ ಕೊಡುವ ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ (ಸಿಎಎ) ರಾಜ್ಯವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು ಈ ಕುರಿತು ಸಚಿವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.