ಮುತ್ತೂಟ್ ಫೈನಾನ್ಸ್ ಕಂಪನಿಯ ಚೇಯರ್ ಮೆನ್ ಎಂ.ಜಿ. ಜಾರ್ಜ್ ಮುತ್ತೂಟ್ ಮಹಡಿಯಿಂದ ಬಿದ್ದು ಮೃತ್ಯು: ದೆಹಲಿ ಪೊಲೀಸ್

0
677

ಸನ್ಮಾರ್ಗ ವಾರ್ತೆ

ದೆಹಲಿ: ದೇಶದ ಆರ್ಥಿಕ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿಕೊಂಡಿರುವ ಮುತ್ತೂಟ್ ಗ್ರೂಪ್ ಆಫ್ ಕಂಪನಿಯ ಚೇಯರ್ ಮೆನ್ ಎಂ.ಜಿ. ಜಾರ್ಜ್ ಮುತ್ತೂಟ್ ಕಟ್ಟಡವೊಂದರಿಂದ ಬಿದ್ದು ಮೃತಪಟ್ಟಿದ್ದಾರೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.

ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನ ಮಾಜಿ ಕಾರ್ಯದರ್ಶಿಯೂ ಆಗಿರುವ ಇವರು ನವದೆಹಲಿಯಲ್ಲಿ ಶುಕ್ರವಾರ ನಿಧನರಾಗಿದ್ದರು‌. ಇಂದು ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಅವರು ಕಟ್ಟಡದಿಂದ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.

ಇವರು ಪತ್ನಿ ಸಾರಾ ಜಾರ್ಜ್ ಮುತೂಟ್ ಮತ್ತು ಇಬ್ಬರು ಪುತ್ರರಾದ ಜಾರ್ಜ್ ಎಂ. ಜಾರ್ಜ್ ಮತ್ತು ಅಲೆಕ್ಸಾಂಡರ್ ಜಾರ್ಜ್ ರವರನ್ನು ಅಗಲಿದ್ದಾರೆ‌.

ದೆಹಲಿಯ ಪೂರ್ವ ಕೈಲಾಶ್‌ನಲ್ಲಿರುವ ಕಟ್ಟಡವೊಂದರ 4 ನೇ ಮಹಡಿಯಿಂದ ಮುತ್ತೂಟ್ ಗ್ರೂಪ್ ನ ಅಧ್ಯಕ್ಷ ಎಂ.ಜಿ.ಜಾರ್ಜ್ ಮುತೂತ್ ಬಿದ್ದಿದ್ದು, ಅವರನ್ನು ಫೋರ್ಟಿಸ್ ಎಸ್ಕಾರ್ಟ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆಂದು ದೆಹಲಿ ಪೊಲೀಸರು ಹೇಳಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಟ್ಟಡದ ನಾಲ್ಕನೇ ಮಹಡಿಯಿಂದ ಆಯತಪ್ಪಿ‌ ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‌ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ವೈದ್ಯರು ಹೇಳಿದ್ದಾರೆ.

ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ರೀತಿಯ ಅನುಮಾನಾಸ್ಪದ ವಿಷಯ ಕಂಡು ಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿದ್ದೇವೆ. ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

2020 ರಲ್ಲಿ ಫೋರ್ಬ್ಸ್ ನಿಯತಕಾಲಿಕೆಯು ಅವರನ್ನು ಭಾರತದ 26 ನೇ ಶ್ರೀಮಂತ ವ್ಯಕ್ತಿ ಎಂದು ಪಟ್ಟಿಮಾಡಿದೆ. ಅವರು FICCI ಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇವರು ಪತ್ನಿ ಸಾರಾ ಜಾರ್ಜ್ ಮುತೂಟ್ ಮತ್ತು ಇಬ್ಬರು ಪುತ್ರರಾದ ಜಾರ್ಜ್ ಎಂ. ಜಾರ್ಜ್ ಮತ್ತು ಅಲೆಕ್ಸಾಂಡರ್ ಜಾರ್ಜ್ ರವರನ್ನು ಅಗಲಿದ್ದಾರೆ.

.