ಸೈನಿಕ ಕ್ಷಿಪ್ರ ಕ್ರಾಂತಿ: ಪುನಃ ಮ್ಯಾನ್ಮಾರ್ ದಿಗ್ಬಂಧನಕ್ಕೆ ಸಜ್ಜಾದ ಅಮೆರಿಕ

0
252

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಫೆ.2: ಮ್ಯಾನ್ಮಾರ್ ಸೈನಿಕ ಬುಡಮೇಲು ಕೃತ್ಯ ವಿರುದ್ಧ ಅಮೆರಿಕ ಬಿಗಿ ಪಟ್ಟು ಹಿಡಿದಿದ್ದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸಿರುವುದನ್ನು ಸಹಿಸಲಾಗದು ಎಂದು ಹೇಳಿಕೆ ನೀಡಿದ್ದಾರೆ.

ಮ್ಯಾನ್ಮಾರ್ ವಿರುದ್ಧ ದಿಗ್ಬಂಧನ ಸಹಿತ ಕೆಲವು ಕ್ರಮಗಳನ್ನು ತಳೆಯಲು ಅಮೆರಿಕ ಆಲೋಚಿಸುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಸೇನೆ ಸೆರೆಹಿಡಿದ ಆಂಗ್ ಸಾನ್ ಸೂಕಿ ಸಹಿತ ನಾಯಕರನ್ನು ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ತಿರುಗೇಟಿಗೆ ಸಿದ್ಧವಾಗಬೇಕೆಂದು ನಿನ್ನೆ ಮ್ಯಾನ್ಮಾರ್ ಸೇನೆಗೆ ಅಮೆರಿಕ ಮುನ್ನೆಚ್ಚರಿಕೆ ನೀಡಿತ್ತು.

ಚುನಾವಣಾ ಫಲಿತಾಂಶ ಬುಡಮೇಲುಗೊಳಿಸುವ ಕ್ರಮವನ್ನು ಬೆಂಬಲಿಸಲಾರೆವು. ಮ್ಯಾನ್ಮಾರಿನಲ್ಲಿ ಪ್ರಜಾಪ್ರಭುತ್ವಪರ ಬದಲಾವಣೆಯನ್ನು ಬಯಸುತ್ತೇವೆ ಎಂದು ವೈಟ್ಹೌಸ್ ವಕ್ತಾರ ಜೆನ್ ಪಾಕಿ ಹೇಳಿದ್ದರು.

ನಿನ್ನೆ ಸರಕಾರವನ್ನು ಮ್ಯಾನ್ಮಾರ್ ಸೇನೆ ಬುಡಮೆಲುಗೊಳಿಸಿ ಅಧಿಕಾರ ಕಿತ್ತುಕೊಂಡಿತ್ತು. ನೋಬೆಲ್ ಪಾರಿತೋಷಕ ವಿಜೇತೆ, ರಾಷ್ಟೀಯ ನಾಯಕಿ ಆಂಗ್ ಸಾನ್ ಸೂಕಿ, ಯುವಿನ್ ಮಿಂಟ್ ಮುಂತಾದ ನಾಯಕರನ್ನು ಸೇನೆ ಜೈಲಿಗಟ್ಟಿದೆ.