ನಕಾಬ್ ಮತ್ತು ಪಾಶ್ಚಾತ್ಯ ನಾಗರಿಕತೆ

0
354

➨ ಯಾಸಿರ್ ಪೀರ್‍ಝಾದ


2011ರಲ್ಲಿ ಫ್ರಾನ್ಸ್ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ನಕಾಬ್ ಧರಿಸುವುದನ್ನು ನಿಷೇಧಿಸಿತು. ಅದರಂತೆ ಯಾವ ಮಹಿಳೆಯೂ ಮನೆ ಯಿಂದ ಹೊರಡುವಾಗ ಮುಖ ಮುಚ್ಚುವಂತಿಲ್ಲ. ಅಂದಿನ ಫ್ರಾನ್ಸ್‍ನ ಅಧ್ಯಕ್ಷ ಸರ್ಕೋಝಿಯವರು ಈ ನಿರ್ಬಂಧವನ್ನು ಸಮರ್ಥಿಸುತ್ತಾ, ನಕಾಬ್ ಒಂದು ಹಿಂಸೆಯಾಗಿದೆ. ಅದನ್ನು ಸ್ವಾಗತಿಸುವಂತಿಲ್ಲ ಎಂದು ಹೇಳಿದ್ದರು. ಏಳು ಕೋಟಿ ಜನಸಂಖ್ಯೆ ಯಿರುವ ಫ್ರಾನ್ಸಿನಲ್ಲಿ ಹೆಚ್ಚೆಂದರೆ ಎರಡು ಸಾವಿರ ಮಹಿಳೆಯರು ತಮ್ಮ ಮುಖ ಮುಚ್ಚುತ್ತಿದ್ದರು. ಅಂತಹ ಓರ್ವ ಮಹಿಳೆಗೆ ದಂಡ ವಿಧಿಸಿದಾಗ ಆಕೆ ಯುರೋಪಿನ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದಳು. ಸರಕಾರದ ಈ ಕ್ರಮವು ಫ್ರಾನ್ಸ್ ಸಂವಿಧಾನದಲ್ಲಿ ನೀಡಲಾದ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆಯೆಂದು ವಾದಿಸಿದಳು. ಆದರೆ 17 ಸದಸ್ಯರ ಬೆಂಚ್ ಮಹಿಳೆಯ ವಾದವನ್ನು ತಿರಸ್ಕರಿಸಿ ಸರಕಾರದ ಕ್ರಮವನ್ನು ಎತ್ತಿ ಹಿಡಿಯಿತು.

ಅದೇ ವರ್ಷ ಬೆಲ್ಜಿಯಂ ಸರಕಾರವೂ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಬಟ್ಟೆ ಹೊದ್ದುಕೊಂಡು, ನಡೆದಾಡುವುದರಿಂದ ಗುರುತು ಪತ್ತೆಹಚ್ಚಲು ಸಾಧ್ಯವಿಲ್ಲವೆಂದು ಅದನ್ನು ನಿರ್ಬಂಧಿ ಸಿತು. ಅದನ್ನು ಬೆಲ್ಜಿಯಂನ ನ್ಯಾಯಾಲಯವು, ಅದರಿಂದ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಸಮರ್ಥಿಸಿತು. ಆ ಬಳಿಕ ಮಾನವ ಹಕ್ಕು ಆಯೋಗವೂ ಅದನ್ನು ಎತ್ತಿ ಹಿಡಿಯಿತು. ಬೆಲ್ಜಿಯಂನ 1.25 ಕೋಟಿ ಜನಸಂಖ್ಯೆಯಲ್ಲಿ ಒಟ್ಟು ಮುಖ ಮುಚ್ಚುವ ಮಹಿಳೆಯರ ಸಂಖ್ಯೆ ಕೇವಲ 215. 2017ರಲ್ಲಿ ಆಸ್ಟ್ರಿಯಾ ಸರಕಾರವೂ ದೇಶದಾದ್ಯಂತದ ಶಾಲೆ-ಕಾಲೇಜುಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ನಕಾಬ್ ಅಥವಾ ಬುರ್ಖಾ ಧರಿಸುವುದನ್ನು, ಅದರಿಂದ ಸ್ವತಂತ್ರವಾಗಿ ಮಾತಾಡುವುದಕ್ಕೆ ಅಡ್ಡಿಯಾಗುತ್ತದೆಂದೂ ಅದನ್ನು ಅಂಗೀಕರಿಸಲು ಯಾವುದೇ ಸ್ವತಂತ್ರ ಸಮಾಜಕ್ಕೆ ಸಾಧ್ಯವಿಲ್ಲವೆಂದೂ ಹೇಳಿ ನಿರ್ಬಂಧಿಸಿತು.

ಆಸ್ಟ್ರಿಯಾದ 88 ಲಕ್ಷ ಜನಸಂಖ್ಯೆಯಲ್ಲಿ ಒಟ್ಟು 150 ಮಹಿಳೆಯರು ತಮ್ಮ ಮುಖ ಮರೆಸುತ್ತಾರೆ. ಅದೇ ವರ್ಷ ಹಾಲೆಂಡ್‍ನಲ್ಲಿ. ಸಾರ್ವಜನಿಕ ಸ್ಥಳದಲ್ಲಿ ಯಾವುದೇ ರೀತಿಯಲ್ಲಿ ಮುಖ ಮುಚ್ಚುವುದಕ್ಕೆ ನಿರ್ಬಂಧ ಹೇರಿತು. ಅಲ್ಲಿನ ಉಗ್ರವಾದಿ ಡಚ್ ರಾಜಕಾರಣಿಗಳು ಅನೇಕ ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಅಲ್ಲಿನ 1.75 ಕೋಟಿ ಜನಸಂಖ್ಯೆಯಲ್ಲಿ ಸುಮಾರು 300 ಮಹಿಳೆಯರು ಮಾತ್ರ ಮುಖಪರದೆ (ನಕಾಬ್) ಹಾಕುತ್ತಾರೆ. ಅದೇ ರೀತಿ ಡೆನ್ಮಾರ್ಕ್, ರಶ್ಯಾ, ಬಲ್ಗೇರಿಯಾ, ಸ್ವಿಝರ್‍ಲ್ಯಾಂಡ್, ಸ್ಪೆಯಿನ್ ಹಾಗೂ ಇಟೆಲಿ ಮುಂತಾದ ದೇಶಗಳಲ್ಲಿ ಅಲ್ಲಲ್ಲಿ ನಕಾಬ್ ಮತ್ತು ಬುರ್ಖಾ ಧರಿಸುವುದಕ್ಕೆ ನಿರ್ಬಂಧವಿದೆ. ತುರ್ಕಿಯಲ್ಲಿ ಮಹಿಳೆಯರು ಸ್ಕಾರ್ಫ್ ಧರಿಸುವುದನ್ನು ಕಮಾಲ್ ಅತಾತುರ್ಕ್ ನಿಷೇಧಿಸಿದ್ದರು. ಕ್ರಮೇಣ ಈ ನಿರ್ಬಂಧವು ಕೊನೆಗೊಂಡಿತು. ಆದರೆ ಸೇನೆ ಮತ್ತು ನ್ಯಾಯಾಲಯಗಳಲ್ಲಿ ಇಂದಿಗೂ ಮಹಿಳೆಯರು ಸ್ಕಾರ್ಫ್ ಧರಿಸುವುದಿಲ್ಲ.

ಜಾತ್ಯತೀತ ಸಮಾಜದಲ್ಲಿ ಧರ್ಮಾಚರಣೆಯು ಪ್ರತಿಯೊಬ್ಬ ನಾಗರಿಕನ ವೈಯಕ್ತಿಕ ವಿಷಯವಾಗಿದೆ. ರಾಷ್ಟ್ರವು ಅದರಲ್ಲಿ ಹಸ್ತಕ್ಷೇಮ ನಡೆಸುವಂತಿಲ್ಲ. ಇದು ಜಾತ್ಯತೀತ ಸಮಾಜದ ಮೂಲಭೂತ ತತ್ವವಾಗಿದೆ. ಯಾವ ಮಹಿಳೆಯೂ ಮುಖ ಪರದೆಯಿಂದ ತನ್ನ ಮುಖವನ್ನು ಮರೆಸುವಂತಿಲ್ಲ ವೆಂಬ ನಿರ್ಬಂಧ ಹೇರಿದ ಕೂಡಲೇ ಆಕೆಯನ್ನು ತನ್ನ ಧರ್ಮದಂತೆ ನಡೆಯುವುದಕ್ಕೆ ಅಡ್ಡಿಪಡಿಸ ಲಾಗುತ್ತದೆಯೆಂದರ್ಥ. ಇನ್ನು ಆಕೆ ಒಂದೋ ಮನೆಯಲ್ಲಿ ಬಂದಿಯಾಗಿರಬೇಕಾಗುತ್ತದೆ ಅಥವಾ ತನ್ನ ಧಾರ್ಮಿಕ ನಂಬಿಕೆಯನ್ನು ದೇಶದ ಕಾನೂನು ಅದಕ್ಕೆ ಅನುಮತಿಸುವುದಿಲ್ಲವೆಂದು ತೊರೆಯಬೇಕಾಗುತ್ತದೆ. ಅಂತಾದರೆ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಓರ್ವ ಮಹಿಳೆಯನ್ನು ತನ್ನ ವಿಶ್ವಾಸ-ನಂಬಿಕೆಯನ್ನು ತೊರೆಯುವಂತೆ ನಿರ್ಬಂಧಿಸಿದಂತಾಗುತ್ತದೆ. ಹಾಗಿರುವಾಗ ತನ್ನನ್ನು ಜಾತ್ಯತೀತ, ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಸಮಾಜವೆಂದು ಕರೆಸಲು ಅದು ಲಾಯಕ್ಕಲ್ಲ.
ಆದರೆ ಕೆಲವೊಂದು ಸಂದರ್ಭಗಳಲ್ಲಿ ಈ ವಾದಕ್ಕೆ ತೂಕವಿದೆ.

ಗುರುತು ಪರಿಚಯ ನೀಡುವುದು ಅತ್ಯಗತ್ಯವಾಗಿರುವಾಗ, ಅಂದರೆ ಶಾಲಾ -ಕಾಲೇಜುಗಳು, ಏರ್ ಪೋರ್ಟ್, ನ್ಯಾಯಾಲಯ, ಮತ ಕೇಂದ್ರಗಳು ಇತ್ಯಾದಿ ಸ್ಥಳಗಳಲ್ಲಿ, ಮಹಿಳೆ ಯರು ತಮ್ಮ ಮುಖ ಪರದೆಯನ್ನು ತೆಗೆಯ ಬಹುದು. ಅದರಲ್ಲಿ ಆಕ್ಷೇಪವಿರಬಾರದು. ಕೋಟಿ ಗಟ್ಟಲೆ ಜನಸಂಖ್ಯೆಯಿರುವ ಪಾಶ್ಚಿಮಾತ್ಯ ಸಮಾಜ ದಲ್ಲಿ ಕೆಲವೇ ಕೆಲವು ಮಹಿಳೆಯರು (ಅವರ ಡಾಟಾ ಕೂಡಾ ಇರುವಾಗ) ನಕಾಬ್ ಧರಿಸಿದರೆ ತಮ್ಮ ಜಾತ್ಯತೀತ ಮೌಲ್ಯಗಳಿಗೆ ಅಪಾಯವಿದೆ ಯೆಂದು ಭಯಪಡುವುದು ಅಥವಾ ಅವರ ನಕಾಬ್ ಅವರ ಮರ್ದಿತಾವಸ್ಥೆಯ ಸಂಕೇತವೆಂದು ಹೇಳುವುದು ಅತ್ಯಂತ ಹಾಸ್ಯಾಸ್ಪದ ವಿಚಾರವಾಗಿದೆ. ಇದನ್ನು ಯಾವ ರೀತಿಯಿಂದಲೂ ಸಮರ್ಥಿಸಲು ಸಾಧ್ಯವಿಲ್ಲ.

ಈ ಪಾಶ್ಚಿಮಾತ್ಯರ ಸ್ವರೂಪ ಹೇಗಿದೆಯೆಂದರೆ ಇಲ್ಲಿ ನಗ್ನ ಕಡಲ ತೀರಗಳಿವೆ. ಇಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಗ್ನವಾಗಿ ಓಟದ ಸ್ಪರ್ಧೆ ನಡೆಸುತ್ತಾರೆ. ಇಲ್ಲಿ ಜಾಗತಿಕ ಪ್ರಸಿದ್ಧ ಫೋಟೋ ಗ್ರಾಫರ್‍ಗಳು ಜನರು ಸೇರಿರುವ ಪ್ರಸಿದ್ಧ ಸ್ಥಳಗಳಲ್ಲಿ ಅವರ ಸಾಮೂಹಿಕ ನಗ್ನ ಚಿತ್ರಗಳನ್ನು ಕ್ಲಿಕ್ಕಿಸಿ ಕಲೆಯ ಹೆಸರಿನಲ್ಲಿ ಶಾಭಾಸ್‍ಗಿಟ್ಟಿಸಿಕೊಳ್ಳುತ್ತಾರೆ. ಇಂತಹ ಸಮಾಜಗಳಲ್ಲಿ ಮಹಿಳೆ ನಗ್ನಳಾದರೆ ಆಕೆ ಸಬಲಳು ಅಥವಾ ಸ್ವತಂತ್ರಳು ಎಂದು ಭಾವಿಸಲಾಗುತ್ತದೆ. ಇದರರ್ಥ ಮಹಿಳೆ ನಗ್ನಳಾಗು ವುದಕ್ಕೆ ಯಾವುದೇ ಅಡ್ಡಿಯಿಲ್ಲ, ಆದರೆ ಆಕೆ ಎಂತಹ ಬಟ್ಟೆ ಧರಿಸಬೇಕೆನ್ನುವುದನ್ನು ತೀರ್ಮಾ ನಿಸುವುದು ಜಾತ್ಯತೀತ ರಾಷ್ಟ್ರದ ಕೆಲಸವಾಗಿದೆ ಎಂದಾಗುತ್ತದೆ. ಹೇಗಿದೆ, ಜಾತ್ಯತೀತ ವ್ಯವಸ್ಥೆ!

ಕೃಪೆ: ದಅ್ ವತ್