ನಾನು ಅವನನ್ನು ಸತ್ಕರಿಸಬೇಕೇ?

0
772

ಸಂಗ್ರಹ: ಎನ್.ಎಂ.ಪಡೀಲ್

ಹುದೈಫರಿಂದ ವರದಿಯಾಗಿದೆ: ಪ್ರವಾದಿ ಯವರು(ಸ) ಹೇಳಿದರು, ನೀವು ಇತರರನ್ನು ಅನುಕರಿಸಬಾರದು. ಅಂದರೆ, ನೀವು ಹೇಳುವಿರಿ.  ಜನರು ಉತ್ತಮ ರೀತಿಯಲ್ಲಿ ವರ್ತಿಸಿದರೆ ನಾವೂ ಅವರೊಡನೆ ಉತ್ತಮ ರೀತಿಯಲ್ಲಿ ವರ್ತಿಸುತ್ತೇವೆ. ಅವರು ಅಕ್ರಮ ತೋರಿದರೆ ನಾವೂ  ಅಕ್ರಮ ವೆಸಗುತ್ತೇವೆ. ಆದರೆ ನೀನು ಮಾಡಬೇಕಾದುದೇ ನೆಂದರೆ ನಿನ್ನನ್ನು ಪರಿಶುದ್ಧಗೊಳಿಸಬೇಕು. ಜನರು ಉತ್ತಮ ವರ್ತನೆ ತೋರಿದರೆ  ನೀನೂ ಉತ್ತಮ ವಾಗಿ ವರ್ತಿಸು. ಅವರು ತಪ್ಪಾಗಿ ವರ್ತಿಸಿದರೆ ನೀನು ಅಕ್ರಮವೆಸಗಬೇಡ. (ಹಸನ್-ತಿರ್ಮಿದಿ)

ಕ್ಷಮಾಗುಣ ಹಾಗೂ ಜನರನ್ನು ಸೆಳೆಯು ವಂತಹ ವ್ಯಕ್ತಿತ್ವವು ಮನುಷ್ಯನಿಗೆ ದೇವದತ್ತವಾಗಿ ದೊರೆಯುವ ಗುಣಗಳಾಗಿವೆ. ಪ್ರತಿಯೋರ್ವ ಸತ್ಯ ವಿಶ್ವಾಸಿಯ ಅನಿವಾರ್ಯ ಗುಣವೂ ಹೌದು. ನಮ್ಮಲ್ಲಿ ಕ್ಷಮಾಗುಣವೆಂಬುದು ಇದ್ದರೆ ಮಾತ್ರ ಜನರನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಹಿಂದೆ ತನ್ನ ಮೇಲಾದ ಅನ್ಯಾಯಕ್ಕೆ ಪ್ರತೀಕಾರ ಪಡೆಯಲು ಮನುಷ್ಯರು ಸಾಮಾನ್ಯವಾಗಿ ಪ್ರಯತ್ನಿ ಸುತ್ತಾರೆ. ಅವಕಾಶ  ಸಿಕ್ಕಿದರೆ ತನಗಾದ ತೊಂದರೆ ಗಳಿಗೆ ಅದೇ ರೀತಿಯಲ್ಲಿ ಅಥವಾ ಅದಕ್ಕಿಂತ ತೀವ್ರವಾಗಿ ಪ್ರತೀಕಾರ ಪಡೆಯುತ್ತಾರೆ. ಆದರೆ ಪ್ರತೀಕಾರ  ಪಡೆದು ಜನರಿಂದ ದೂರವಾಗುವುದಕ್ಕಿಂತ ಅವರನ್ನು ಪ್ರೀತಿಯಿಂದ ಒಲಿಸಿಕೊಳ್ಳಬೇಕೆಂದು ಇಸ್ಲಾಮ್ ಕಲಿಸುತ್ತದೆ.

ಪ್ರವಾದಿ(ಸ)ರೊಂದಿಗೆ ಅಲ್ಲಾಹನು ಹೇಳುತ್ತಾನೆ- “ನೀವು ಇವರ ಪಾಲಿಗೆ ಅತ್ಯಂತ ಸೌಮ್ಯ  ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ  ಕೃಪೆಯಾಗಿದೆ. ನೀವು ಕಠಿಣ ಸ್ವಭಾವಿ ಹಾಗೂ ಕಲ್ಲೆದೆಯವರಾಗಿರು ತ್ತಿದ್ದರೆ ಇವರೆಲ್ಲರೂ ನಿಮ್ಮ ಸುತ್ತಮುತ್ತಲಿನಿಂದ ಚದುರಿ ಹೋಗುತ್ತಿದ್ದರು.  ಇವರ ಪ್ರಮಾದಗಳನ್ನು ಕ್ಷಮಿಸಿ. ಇವರ ಪಾಪ ವಿಮೋಚನೆಗಾಗಿ ಪ್ರಾರ್ಥಿಸಿ. (3: 159)

ಈ ಸೂಕ್ತವು ಉಹುದ್ ಯುದ್ಧದ ಸಂದರ್ಭ ದಲ್ಲಿ ಮುಸ್ಲಿಮ್ ಸೇನೆಯ ಕೆಲವರು ಪ್ರವಾದಿ ವರ್ಯರ(ಸ) ಆಜ್ಞೆಗೆ ವಿರುದ್ಧವಾಗಿ  ವರ್ತಿಸಿದ್ದರಿಂದ ಅವರು ನಿರಾಶೆ ಹೊಂದಿದ್ದ ಸಂದರ್ಭದಲ್ಲಿ ಅವತೀರ್ಣವಾಗಿತ್ತು. ಇದು ಪ್ರವಾದಿಯವರನ್ನು(ಸ) ಸಾಂತ್ವನಗೊಳಿಸಿ,  ಪ್ರವಾದಿಯವರ ಮೂಲಕ ಅಲ್ಲಾಹನು ನೀಡಿದ ಅನುಗ್ರಹಗಳನ್ನು ಮುಸ್ಲಿಮರಿಗೆ ನೆನಪಿಸಿ ಕೊಡುವ ರೀತಿಯಲ್ಲಿದೆ. ಅವರು ಸೌಮ್ಯ ಸ್ವಭಾವಿಯೂ, ಕರುಣಾಳುವೂ ಆಗಿದ್ದುದು ಪ್ರವಾದಿ ವರ್ಯರಿಗೂ, ಅವರಿಗೂ ಲಭಿಸಿದ ದೇವ ಕಾರುಣ್ಯ ವಾಗಿತ್ತು. ಅವರು ಕಠಿಣ  ಹೃದಯಿಯೂ, ಕಲ್ಲೆದೆಯ ವರೂ ಆಗಿರುತ್ತಿದ್ದರೆ ಅವರ ಸುತ್ತಲೂ ಜನರ ಸೇರಿಕೊಳ್ಳುತ್ತಿರಲಿಲ್ಲ.

ಜನರು ಯಾವಾಗಲೂ ಪ್ರೀತಿಯ ಒಡನಾಟ ವನ್ನು ಇಷ್ಟಪಡುತ್ತಾರೆ. ಸ್ನೇಹ ವಾತ್ಸಲ್ಯದ ನೋಟ ಹಾಗೂ ಮುಗುಳ್ನಗೆಯೂ ಇರಬೇಕು.  ಅವರ ಅಜ್ಞಾನ, ದೌರ್ಬಲ್ಯಗಳನ್ನು ಅರಿತುಕೊಂಡು ಯುಕ್ತಿ ಪೂರ್ಣವಾಗಿ ವರ್ತಿಸಲು ಸಾಧ್ಯವಾಗಬೇಕು. ಅವರಿಗೆ ಬೇಕಾದುದೆಲ್ಲವನ್ನೂ ನೀಡಿ, ಅವರಿಂದ ಏನನ್ನು ನಿರೀಕ್ಷಿಸದೆ, ಅವರ ದುಃಖಗಳಲ್ಲಿ ಸಹಭಾಗಿ ಗಳಾಗಿ, ನಮ್ಮ ದುಃಖಗಳನ್ನು ಅವರ ಮೇಲೆ ಹೊರಿಸದಿರಬೇಕು.  ಇತರರ ಬಗ್ಗೆ ಸದಾ ಕಾಳಜಿ, ಅನುಕಂಪವಿರಬೇಕು. ಪ್ರವಾದಿಯವರ(ಸ) ಮನಸ್ಸು ಆ ರೀತಿಯಾಗಿತ್ತು. ತನಗಾಗಿ ಅವರು ಜನರೊಂದಿಗೆ  ಕೋಪಗೊಳ್ಳಲಿಲ್ಲ. ಅವರು ದೌರ್ಬಲ್ಯ ಮುಗ್ಧತೆ, ಒರಟುತನವನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿತ್ತು. ಲೌಕಿಕ ವ್ಯಾಮೋಹವು  ಅವರನ್ನು ಕಾಡಿರಲಿಲ್ಲ. ತನ್ನಲ್ಲಿರುವುದನ್ನೆಲ್ಲಾ ಉದಾರವಾಗಿ ಜನರಿಗೆ ನೀಡಿದರು. ಅವರ ದಯೆ, ವಾತ್ಸಲ್ಯವನ್ನು ಎಲ್ಲರೂ ಅನುಭವಿಸಿದರು.  ಅವರನ್ನು ಭೇಟಿಯಾದ ವರು ಅವರ ಸ್ನೇಹಮಾಧುರ್ಯಕ್ಕೆ ಮನ ಸೋಲುತ್ತಿದ್ದರು.

ನಮ್ಮೊಂದಿಗೆ ಕೆಟ್ಟ ರೀತಿಯಲ್ಲಿ ವರ್ತಿಸಿದವರೊಡನೆ ಅದೇ ರೀತಿಯಲ್ಲಿ ಪ್ರತೀಕಾರ ವೆಸಗುವ ಬದಲು, ಅವರಿಗೆ ಯಾವುದೇ ತೊಂದರೆ ನೀಡದಿರುವುದೋ ಅಥವಾ ಅವರಿಗೆ ಒಳಿತನ್ನೇ ಮಾಡಿ ಸಿಹಿಯಾದ ಪ್ರತೀಕಾರವನ್ನು ಪಡೆಯಬೇಕು ಎಂಬುದು ಈ ಹದೀಸ್‍ನ ತಿರುಳು.

ಮಾಲಿಕಿಬ್ನು ನದ್‍ಲತುಲ್ ಜುಶಮಿಯವ ರಿಂದ ಉಲ್ಲೇಖಗೊಂಡಿದೆ. ನಾನು ಕೇಳಿದೆ! “ಅಲ್ಲಾಹನ ಸಂದೇಶವಾಹಕರೇ, ನಾನು ಓರ್ವ  ವ್ಯಕ್ತಿಯ ಊರಿನ ಮೂಲಕ ಪ್ರಯಾಣಿಸಿದೆ. ಆದರೆ ಆತ ನನ್ನನ್ನು ಸತ್ಕರಿಸಲಿಲ್ಲ. ನಂತರ ಆತ ನನ್ನ ಊರಿನ ದಾರಿಯಾಗಿ ಪಯಣ ಬೆಳೆಸಿದ ನಾನು ಅವನನ್ನು ಸತ್ಕರಿಸಬೇಕೇ?
ಪ್ರವಾದಿಯವರು(ಸ) ಹೇಳಿದರು: ಖಂಡಿತ ವಾಗಿಯೂ ನೀವು ಅವರಿಗೆ ಅತಿಥಿ ಸತ್ಕಾರ ಮಾಡ ಬೇಕು. ಹೀಗೆ ಉತ್ತಮ ರೀತಿಯಲ್ಲಿ  ಜನರೊಂದಿಗೆ ವರ್ತಿಸಬೇಕೆಂದು ಪವಿತ್ರ ಕುರ್‍ಆನ್ ಹಾಗೂ ಪ್ರವಾದಿ ವಚನಗಳು ನಮಗೆ ಕಲಿಸಿಕೊಡುತ್ತದೆ. ನಮ್ಮೊಂದಿಗೆ ಕೆಟ್ಟದಾಗಿ  ವರ್ತಿಸಿದವರನ್ನು ಕ್ಷಮಿಸ ಬೇಕು. ಸತ್ಯವಿಶ್ವಾಸಿಗಳು ಸರ್ವರಿಗೂ ಪ್ರೀತಿಯನ್ನು ನೀಡಬೇಕಾದವರು. ಜಾತಿ ಧರ್ಮ, ಭೇದವಿಲ್ಲದೆ ಸರ್ವಧರ್ಮೀರನ್ನೂ, ಪ್ರಾಣಿ, ಪಕ್ಷಿ, ಗಿಡ, ಮರ ಗಳಿಗೂ ನಮ್ಮ ಸ್ನೇಹವನ್ನು ಹಂಚಬೇಕು. ಒಂದು ಮುಗುಳ್ನಗೆಯಿಂದ ಇತರರ ಹೃದಯದಲ್ಲಿ  ಸ್ಥಾನ ಪಡೆಯಬೇಕು. ಅತ್ಯಂತ ಸರಳವಾಗಿ, ತಾಳ್ಮೆ ಯೊಂದಿಗೆ ಸಂವಾದ ನಡೆಸಬೇಕು. ಒಮ್ಮೆ ನಮ್ಮನ್ನು ಭೇಟಿಯಾದವರು ನಮ್ಮನ್ನು  ಎಂದಿಗೂ ಮರೆಯ ದಂತಹ ವ್ಯಕ್ತಿತ್ವ ನಮ್ಮದಾಗಬೇಕು.