ಭಾರತದ ಸಮುದ್ರ ಗಡಿಯಲ್ಲಿ ಚೀನದ ಅಣ್ವಸ್ತ್ರ ಹಡಗುಗಳು!

0
223

ಸನ್ಮಾರ್ಗ ವಾರ್ತೆ

ಮುಂಬೈ,ಸೆ.16: ಭಾರತದ ಸಮುದ್ರ ಗಡಿಗೆ ನಿಕಟವಾಗಿ ಚೀನದ ಅಣ್ವಸ್ತ್ರ ಯುದ್ಧ ಹಡಗುಗಳು ಸಂಚರಿಸುತ್ತಿರುವುದನ್ನು ನೌಕಾದಳ ಪತ್ತೆ ಹಚ್ಚಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನದ ಉಪಸ್ಥಿತಿ ಹೆಚ್ಚಳವಾಗಿದ್ದು ಇದು ಆತಂಕಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನದ ಅಂಫಿಬಿಯಸ್ ಯುದ್ಧ ಹಡಗು ಝಿಯಾನ್ ಮತ್ತು ಮಿಸೈಲ್ ಯುದ್ಧ ಹಡಗುಗಳ ಚಿತ್ರಗಳನ್ನು ಇಂಡಿಯಾ ಟುಡೆ ಟಿವಿ ಹೊರಬಿಟ್ಟಿದೆ. ಹಿಂದೂ ಮಹಾಸಾಗರದಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದ ವೇಳೆ ನೌಕಾಸೇನೆಯ ಪಿ-8ಐ ಎನ್ನುವ ಸಮುದ್ರ ನಿರೀಕ್ಷಣಾ ವಿಮಾನ ಚೀನದ ಹಡಗುಗಳು ಸಂಚರಿಸುತ್ತಿರುವ ಚಿತ್ರವನ್ನು ತೆಗೆದಿದೆ.