ಚರ್ಚ್ ಬಳಿ 3 ದಿವಸದ ಹೆಣ್ಣು ಮಗುವನ್ನು ಇಟ್ಟು ಹೊರಟೇ ಹೋದರು

0
207

ಸನ್ಮಾರ್ಗ ವಾರ್ತೆ

ಕೇರಳ,ಜೂ.30: ಮರದಿಮೂಡ್ ಸೇಂಟ್ ಜಾರ್ಜ್ ಚರ್ಚ್ ಬಾಗಿಲಬಳಿ ಮೂರು ದಿನದ ಹೆಣ್ಣುಮಗುವನ್ನು ತೊರೆದು ಹೋಗಿರುವುದು ಕಂಡು ಬಂದಿದೆ. ಮಂಗಳವಾರ ಬೆಳಗ್ಗೆ ಸಮೀಪದ ನಿವಾಸಿಯೊಬ್ಬರು ಚರ್ಚ್‍ಗೆ ಬಂದಾಗ ಬಟ್ಟೆಯ ಹೊದಿಕೆಯಲ್ಲಿದ್ದ ಎಳೆಯ ಶಿಶುವನ್ನು ನೋಡಿದ್ದಾರೆ.

ನಂತರ ಈ ವಿಷಯವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ತಿಳಿಸಲಾಯಿತು. ಅಲ್ಲಿ ಶಿಶುಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರೊ.ಕೆ.ಮೋಹನ್ ಕುಮಾರ್ ಮತ್ತು ಅಡೂರ್ ಪೊಲೀಸರು ಬಂದು ಮಗುವನ್ನು ಪಡೆದು ಕೊಂಡರು. ಮತ್ತು ಅಡೂರ್ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯಕೀಯ ಪರೀಕ್ಷೆಯ ಬಳಿಕ ಮಗುವನ್ನು ಪತ್ತನಂತಿಟ್ಟ ಶಿಶು ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here