ನ್ಯೂಜಿಲಾಂಡ್ ಹತ್ಯಾಕಾಂಡ: ಸಾವಿನಿಂದ ಸ್ವಲ್ಪದರಲ್ಲೇ ಪಾರಾದ ಬಾಂಗ್ಲಾ ಕ್ರಿಕೆಟಿಗರು, ನಮಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ ಮುಷ್ಫಿಕುರ್ರಹೀಮ್

0
460

ಕ್ರೈಸ್ಟ್ ಚರ್ಚ್: ನ್ಯೂಝಿಲಾಂಡ್ ನ ಎರಡು ಮಸೀದಿಗಳಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಯಲ್ಲಿ ಬಾಂಗ್ಲಾ ದೇಶದ ಕ್ರಿಕೆಟಿಗರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ ಎಂದು ನ್ಯೂಜಿಲಾಂಡಿನ the straits times ಪತ್ರಿಕೆ ವರದಿ ಮಾಡಿದೆ. ಬಂದೂಕುಧಾರಿಗಳು ಶುಕ್ರವಾರ ಜುಮಾ ನಮಾಜಿಗೆ ಬಂದವರ ಮೇಲೆ ನಡೆಸಿದ ದಾಳಿಯಲ್ಲಿ ೪೯ ಮಂದಿ ಮೃತರಾಗಿದ್ದು ಅನೇಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ.

ಬಾಂಗ್ಲಾ ದೇಶದ ಕ್ರಿಕೆಟ್ ತಂಡ ನ್ಯೂಜಿಲಾಂಡ್ ನಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದು ಘಟನೆಯ ಸಮಯದಲ್ಲಿ ಕ್ರೈಸ್ಟ್ ಚರ್ಚ್ ನಲ್ಲಿರುವ ಅಲ೦ ನೂರ್ ಮಸೀದಿಗೆ ನಮಾಜ್ ಗೆ ಹೊರಟಿದ್ದರು.

ತಂಡವು ಹಾನಿಗೊಳಗಾಗದಿದ್ದರೂ ಶಾಕ್ ನಲ್ಲಿದೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿಯ ವಕ್ತಾರ ಜಲಾಲ್ ಯೂನಸ್ ಹೇಳಿದ್ದಾರೆ. ಘಟನೆಯನ್ನು ಅನುಸರಿಸಿ ಶನಿವಾರದಿಂದ ಪ್ರಾರಂಭವಾಗಬೇಕಿದ್ದ ಟೆಸ್ಟ್ ಅನ್ನು ಮುಂದೂಡಲಾಗಿದೆ. ಘಟನೆ ಭಯಾನಕ ಎಂದು ಆರಂಭ ಆಟಗಾರ ತಮೀಮ್ ಇಕ್ಬಾಲ್ ಟ್ವೀಟ್ ಮಾಡಿದ್ದರೆ, ನಾವು ನಿಜಕ್ಕೂ ಅದೃಷ್ಟವಂತರು. ಇನ್ನೊಮ್ಮೆ ಇಂಥ ಘಟನೆಯನ್ನು ವೀಕ್ಷಿಸಲು ಬಯಸುವುದಿಲ್ಲ, ನಮಗಾಗಿ ಪ್ರಾರ್ಥಿಸಿ ಎಂದು ಎಂದು ಘಟನೆಯ ಬಗ್ಗೆ ವಿಕೆಟ್ ಕೀಪರ್ ಮುಷ್ಫಿಕುರ್ರಹೀಮ್ ಟ್ವೀಟ್ ಮಾಡಿದ್ದಾರೆ.