ಕೊರೋನ ಮಾರ್ಗಸೂಚಿಯ ಆಧಾರದಲ್ಲಿ ಮುಂದಿನ ಹಜ್ಜ್ ಪ್ರಕ್ರಿಯೆ- ಸಚಿವ ಅಬ್ಬಾಸ್ ನಕ್ವಿ

0
484

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.20: ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಹಜ್ಜ್ ಕುರಿತ ಅಂತಿಮ ತೀರ್ಮಾನವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕೊರೋನ ಮಾರ್ಗಸೂಚಿಯಂತೆ ತಳೆಯಲಾಗುವುದು ಎಂದು ಅಲ್ಪಸಂಖ್ಯಾತರ ವಿಷಯಗಳ ಸಚಿವ ಮುಕ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.

ಮುಂದಿನ ವರ್ಷ ಹಜ್ಜ್ ಯಾತ್ರಿಕರ ನಿರ್ಣಯ ಪ್ರಕ್ರಿಯೆಯು ಜೂನ್, ಜುಲೈ ತಿಂಗಳಲ್ಲಿ ಪ್ರಕ್ರಿಯೆ ನಡೆಯಲಿದೆ. ಸೌದಿ ಅರೇಬಿಯದ ತೀರ್ಮಾನದ ಬಳಿಕ ಕೇಂದ್ರ ಹಜ್ಜ್ ಸಮಿತಿ ಮತ್ತು ಇತರ ಏಜೆನ್ಸಿಗಳಿಂದ ಅಧಿಕೃತವಾಗಿ ಹಜ್ಜ್‌‌ಗೆ ಅರ್ಜಿ ಸ್ವೀಕಾರ ಆರಂಭವಾಗಲಿದೆ ಎಂದು ಅವಲೋಕನ ಸಭೆಯಲ್ಲಿ ಸಚಿವರು ತಿಳಿಸಿದರು.

ಕಳೆದ ವರ್ಷ ಹಜ್ಜ್‌ ಯಾತ್ರೆಯು ಕೊರೋನದಿಂದಾಗಿ ರದ್ದಾಗಿತ್ತು. ಹಜ್ಜ್ ಪ್ರಕ್ರಿಯೆಗಳು ಪೂರ್ಣ ರೂಪದಲ್ಲಿ ಡಿಜಿಟಲ್ ಆಗಿರುವುದರಿಂದ ಕಳೆದ ವರ್ಷದ 1,23,000 ಅರ್ಜಿಗಳಿಗೆ 2100 ಕೋಟಿ ರೂಪಾಯಿ ಅವರ ಬ್ಯಾಂಕ್ ಖಾತೆ ಮೂಲಕ ಮರಳಿಸಲಾಗಿದೆ. ಸೌದಿ ಅರೇಬಿಯ ಸಾರಿಗೆ ಕುರಿತು ನೀಡಬೇಕಾದ ನೂರು ಕೋಟಿ ರೂಪಾಯಿಯನ್ನು ಮರಳಿಸಿದೆ. ಹಜ್ಜ್ ಪ್ರಕ್ರಿಯೆ ಪೂರ್ಣವಾಗಿ ಡಿಜಿಟಲ್ ಆಗಿರುವುದರಿಂದ ಕಳೆದ ಮೂರು ವರ್ಷಗಳಿಂದ 514 ಕೋಟಿಗೂ ಹೆಚ್ಚು ಹಣವನ್ನು ಅವರ ಖಾತೆಗೆ ಮರಳಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.