CAA ವಿರೋಧಿ ಪ್ರತಿಭಟನೆ: ಪೊಲೀಸ್ ಹಿಂಸಾಚಾರಕ್ಕೆ ಜಾಮಿಯಾ ವಿದ್ಯಾರ್ಥಿಗಳನ್ನು ದೂಷಿಸಿದ NHRC ವರದಿ!- ವಿಡಿಯೋ

0
265

ಸನ್ಮಾರ್ಗ ವಾರ್ತೆ

ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ ಸಮವಸ್ತ್ರಧಾರಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ಭಾರತ ಸೇರಿದಂತೆ ವಿಶ್ವದಾದ್ಯಂತ ಮುಖ್ಯಾಂಶಗಳನ್ನು ರೂಪಿಸಿದ ಏಳು ತಿಂಗಳ ನಂತರ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನ್ನ ವರದಿಯನ್ನು ಬಿಡುಗಡೆ ಮಾಡಿದೆ.

ಪೊಲೀಸರ ಹೇಳಿಕೆಯ ನಿರೂಪಣೆಯನ್ನೇ ಎನ್‌ಎಚ್‌ಆರ್‌ಸಿ ಖರೀದಿಸುವುದಲ್ಲದೇ, ವಿದ್ಯಾರ್ಥಿಗಳು ಯಾವುದಕ್ಕಾಗಿ ಪ್ರತಿಭಟನೆಯನ್ನು ನಡೆಸಿದರು ಎಂಬುದನ್ನು ನೋಡುವುದರಲ್ಲಿ ವಿಫಲವಾಗಿದೆ. ಪ್ರತಿಭಟನೆಯಲ್ಲಿ ನಡೆದ ಹಿಂಸಾತ್ಮಕ ದಾಳಿಗಳು ಮತ್ತು ಪೊಲೀಸರ ದೌರ್ಜನ್ಯಕ್ಕೆ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ NHRC ವರದಿಯನ್ನು ಬಿಡುಗಡೆ ಮಾಡಿದೆ.

ಯುವ ವಿದ್ಯಾವಂತ ಧ್ವನಿಗಳು ಜಾರಿಗೆ ಬಂದ ತಾರತಮ್ಯದ ಕಾನೂನಿನ ವಿರುದ್ಧ ಪ್ರತಿಭಟಿಸಿದ್ದನ್ನು ಕಾನೂನು ವಿರೋಧಿ ಕೃತ್ಯ ಎಂದು ವರದಿಯು ಹೇಳಿದ್ದು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ನಾಯಕರು ಸೇರಿ ಪ್ರತಿಭಟನೆಯಲ್ಲಿ ಹಿಂಸಾತ್ಮಕ ದೌರ್ಜನ್ಯವ್ಯಸಿದ್ದು, ಹಿಂಸೆಗೆ ಪ್ರರಣೆ ನೀಡಿದವರನ್ನು ಪತ್ತೆ ಹಚ್ಚಬೇಕೆಂದು ವರದಿಯು ಹೇಳುತ್ತದೆ.ದಿ ವೈಯರ್‌ ಪ್ರಕಟಿಸಿದ ವಿಡಿಯೋ ದಲ್ಲಿ NHRC ವರದಿಯನ್ನು ಕಾಣಬಹುದು.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.