ಆರ್‌ಜೆಡಿ ಸೇರುವ ಸಂದೇಹ: ಬಿಹಾರದಲ್ಲಿ ಸಚಿವ ಶ್ಯಾಮ್ ರಜಾಕ್‍ ವಜಾ

0
190

ಪಾಟ್ನ,ಆ. 17: ಬಿಹಾರದ ಜನತಾದಳ(ಸಂಯುಕ್ತ) ಸರಕಾರದ ಸಚಿವ ಶ್ಯಾಮ್ ರಜಾಕ್‍ರನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪುಟದಿಂದ ಕೈಬಿಟ್ಟಿದ್ದಾರೆ. ಇವರು ಜೆಡಿಯುಗೆ ರಾಜೀನಾಮೆ ನೀಡಲಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದ್ದು, ಸಚಿವ ಸಂಪುಟದಿಂದ ರಜಾಕ್‍ರನ್ನು ಕೈಬಿಡುವ ಮುಖ್ಯಮಂತ್ರಿ ನಿತೀಶ್‍ರ ಶಿಫಾರಸ್ಸನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

ಆದರೆ, ಈ ಕುರಿತು ಹೇಳಿಕೆ ನೀಡಿದ ಶ್ಯಾಮ್ ರಜಾಕ್ ಪಕ್ಷದಿಂದ ವಜಾಗೊಳಿಸಲ್ಲ ಬದಲಾಗಿ ಸ್ವತಃ ತಾನೇ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಲಾಲು ಪ್ರಸಾದ್ ಯಾದವ್‍ರ ರಾಷ್ಟ್ರೀಯ ಜನತಾ ದಳಕ್ಕೆ ರಜಾಕ್ ಸೇರಲಿದ್ದಾರೆ ಎಂದು ದಟ್ಟ ವದಂತಿ ಪ್ರಚಾವಾಗಿತ್ತು. ಬಿಹಾರದ ವಿಧಾನಸಭಾ ಚುನಾವಣೆಗೆ ಮೂರು ತಿಂಗಳು ಮಾತ್ರ ಉಳಿದಿದೆ. ನಿತೀಶ್ ಕುಮಾರ್ ಜನರ ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂದು ಆರ್‌ಜೆಡಿ ಆರೋಪಿಸುತ್ತಿದೆ.

ಆರ್‌ಜೆಡಿ, ಕಾಂಗ್ರೆಸ್‍ನೊಂದಿಗೆ ಸೇರಿ 2015ರಲ್ಲಿ ಗೆದ್ದ ಬಳಿಕ ನಿತೀಶ್ ಕುಮಾರ್ ತನ್ನ ಎರಡು ಮಿತ್ರ ಪಕ್ಷಗಳನ್ನು ಕೈಬಿಟ್ಟು ನಂತರ ಬಿಜೆಪಿಯೊಂದಿಗೆ ಸೇರಿ ಅಧಿಕಾರವನ್ನು ಉಳಿಸಿಕೊಂಡಿದ್ದರು.

2014ರ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾದಾಗ ನಿತೀಶ್ ಎನ್‍ಡಿಎಯಿಂದ ಹೊರ ಬಂದಿದ್ದರು. ನಿತೀಶ್ ತನ್ನನ್ನು ಮೂಲೆಗೆ ತಳ್ಳಲು ಯತ್ನಿಸುತ್ತಿದ್ದಾರೆ ಎಂದು ಸಚಿವ ರಝಾಕ್ ಸಂದೇಹ ಪಟ್ಟಿದ್ದರು.

ಮುಂದಿನ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಗುವುದು ಕಷ್ಟ ಎಂಬ ಸೂಚನೆಗಳು ಲಭಿಸಿತ್ತು. ಪಾರ್ಟಿಯಲ್ಲಿ ಎರಡನೆ ಸ್ಥಾನದಲ್ಲಿರುವ ಆರ್‌ಸಿಪಿ ಸಿಂಗ್ ಅವರು ಇನ್ನೊಬ್ಬ ದಲಿತ ನಾಯಕ ಅರುಣ್ ಮಾಂಜಿಯವರನ್ನು ರಜಾಕ್ ಬದಲಾಗಿ ಅಭ್ಯರ್ಥಿಯಾಗಿಸಲು ಬೆಂಬಲಿಸಿದ್ದಾರೆ. ತನ್ನ ಪ್ರಿನ್ಸಿಪಲ್ ಕಾರ್ಯದರ್ಶಿ ಎಸ್.ಸಿದ್ಧಾರ್ಥರನ್ನು ಬದಲಾಯಿಸಬೇಕೆಂದು ರಜಾಕ್ ಹೇಳಿದರೂ ಮುಖ್ಯಮಂತ್ರಿ ನಿತೀಶ್ ಒಪ್ಪಿರಲಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.