ಎನ್‍ಪಿಆರ್, ಎನ್ ಆರ್ ಸಿ ಜಾರಿಗೊಳಿಸುವುದಿಲ್ಲ ಎನ್ನುವುದು ಸಚಿವ ಸಂಪುಟದ ತೀರ್ಮಾನ: ಕೇರಳ ಮುಖ್ಯಮಂತ್ರಿ

0
384

ಸನ್ಮಾರ್ಗ ವಾರ್ತೆ

ತಿರುವನಂತಪುರಂ, ಜ. 20: ರಾಷ್ಟ್ರೀಯ ಪೌರತ್ವ ಪಟ್ಟಿ (ಎನ್ ಪಿ ಆರ್), ರಾಷ್ಟ್ರೀಯ ಜನಸಂಖ್ಯಾ ಪಟ್ಟಿ (ಎನ್‍ಆರ್ ಸಿ) ರಾಜ್ಯದಲ್ಲಿ ನಡೆಸುವುದು ಬೇಡ ಎನ್ನುವುದು ಸಚಿವ ಸಂಪುಟದ ತೀರ್ಮಾನ . ಈ ವಿಷಯ ಕೇಂದ್ರ ಸೆನ್ಸಸ್ ನಿರ್ದೇಶಕರಿಗೆ ಅಧಿಕೃತವಾಗಿ ತಿಳಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಜನಸಂಖ್ಯೆಯ ಲೆಕ್ಕ ಪೂರ್ತಿ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಜನನ ತಾರೀಕು, ತಂದೆತಾಯಿ ವಿವರಗಳನ್ನು ಸೆನ್ಸಸ್ ಪ್ರಶ್ನಾವಳಿಯಿಂದ ಕೈಬಿಟ್ಟು ಸೆನ್ಸಸ್ ನಡೆಸಲಾಗುವುದು.

ಸ್ಥಳೀಯಾಡಳಿತ ವಾರ್ಡ್ ವಿಭಜನೆ ಮಸೂದೆ ಕರಡಿಗೆ ಸಚಿವ ಸಂಪುಟ ಸಭೆ ಅಂಗೀಕಾರನೀಡಿತು. ವಾರ್ಡ್ ವಿಭಜನೆ ಸಂಬಂಧಿಸಿ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಸುಗ್ರೀವಾಜ್ಞೆಯಲ್ಲಿ ವಿವರಿಸಲಾದ ಮಾದರಿಯ ವಾರ್ಡ್ ವಿಭಜನೆಯ ಕರಡು ಮಸೂದೆಯನ್ನು ಸರಕಾರ ತಯಾರಿಸಿದೆ. ಜನುವರಿ 30ಕ್ಕೆ ವಿಧಾನಸಭಾ ಅಧಿವೇಶನ ಕರೆದು ಸಚಿವ ಸಂಪುಟ ಸಭೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಈ ವರ್ಷ ಪ್ರಥಮ ವಿಧಾನಸಭಾ ಅಧಿವೇಶನ ನಡೆಯಲಿದೆ ಎಂದು ಪಿಣರಾಯ್ ವಿಜಯಂ ಹೇಳಿದರು.