ಕೃಷಿ ಕ್ಷೇತ್ರವನ್ನು ಪ್ರವೇಶಿಸುವ ಕುರಿತು ಯೋಚಿಸಿಲ್ಲ ಎಂದ ರಿಲಯನ್ಸ್; ಧ್ವಂಸಗಳನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಮೊರೆ

0
392

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.4: ಕೇಂದ್ರ ಸರಕಾರದ ಕೃಷಿ ಕಾನೂನು ವಿರುದ್ಧ ರೈತರ ಹೋರಾಟವು ತೀವ್ರತೆಯನ್ನು ಪಡೆದಿದ್ದು, ಕೃಷಿ ಕ್ಷೇತ್ರವನ್ನು ಪ್ರವೇಶಿಸುವ ಕುರಿತು ಯಾವುದೇ ರೀತಿಯಲ್ಲಿ ಯೋಚಿಸಿಲ್ಲ ಎಂಬುದಾಗಿ ರಿಲಯನ್ಸ್ ಸ್ಪಷ್ಟನೆ ನೀಡಿದೆ‌.

ಕಾರ್ಪೊರೇಟ್‍ಗಳು ಕೃಷಿ ಕ್ಷೇತ್ರವನ್ನು ವಶಪಡಿಸಿಕೊಳ್ಳುತ್ತಾರೆ ಎಂಬ ಆರೋಪವು ಬಲವಾಗಿ ಕೇಳಿಬಂದಿತ್ತು. ಇದರಲ್ಲಿ ಅತೀ ಹೆಚ್ಚಾಗಿ ಕೇಂದ್ರದ ನಿಕಟ ಮಿತ್ರ ಎಂಬ ಹೆಸರಿನಲ್ಲಿ ಅಂಬಾನಿಯ ರಿಲಯನ್ಸ್ ಟೀಕೆಗೆ ಗುರಿಯಾಗಿತ್ತು. ಪಂಜಾಬ್, ಹರಿಯಾಣದ ರೈತರು ರಿಲಯನ್ಸ್ ಜಿಯೊ ಬಹಿಷ್ಕರಿಸಿದ್ದು ವ್ಯಾಪಕವಾಗಿ ರಿಲಯನ್ಸ್ ಟವರ್‌ಗಳು,ಪೆಟ್ರೋಲ್ ಬಂಕ್‍ಗಳಿತ್ಯಾದಿಗೆ ಅಡಚಣೆ ಉಂಟು ಮಾಡಿದ್ದರು. ಕೃಷಿ ಕಾನೂನುಗಳು ರೈತರಿಗಿರುವುದಲ್ಲ. ಕಾರ್ಪೊರೇಟ್‍ಗಳಿಗಿರುವುದು ಎಂದು ರೈತರು ವಾದಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಒಂದು ತಿಂಗಳಿನಿಂದ ವ್ಯಾಪಕ ನಾಶನಷ್ಟ ಎದುರಿಸಿದ ಆಸ್ತಿ ಮತ್ತು ಸೇವೆಗಳಿಗೆ ಸರಕಾರಿ ಸಂರಕ್ಷಣೆಯನ್ನು ಕೇಳಿ ರಿಲಯನ್ಸ್ ಕೋರ್ಟಿನ ಮೊರೆ ಹೋಗಿದೆ. ಜೊತೆಗೆ ರೈತರನ್ನು ಬೆಂಬಲಿಸಿ ಹೇಳಿಕೆಯನ್ನು ನೀಡಿದೆ.

ವ್ಯಾಪಕ ನಷ್ಟವಾದ್ದರಿಂದ ರಿಲಯನ್ಸ್ ಜಿಯೊ ಸರಕಾರದ ಸಹಾಯ ಕೇಳಿ ಪಂಜಾಬ್-ಹರಿಯಾಣ ಹೈಕೋರ್ಟಿಗೆ ಅರ್ಜಿಸಲ್ಲಿಸಿದೆ. ಅಕ್ರಮ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಕೊನೆಗೊಳಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಿದೆ. ಇಂತಹ ಅಕ್ರಮ ಚಟುವಟಿಕೆಗಳು ಎರಡು ರಾಜ್ಯಗಳ ಸಾವಿರಾರು ಕೆಲಸಗಾರರ ಜೀವಕ್ಕೆ ಬೆದರಿಕೆಯಾಗಿದೆ. ಎಂದು ರಿಲಯನ್ಸ್ ಹೇಳಿಕೆ ನೀಡಿದೆ. ನಾಶ ಚಟುವಟಿಕೆಗಳು ನಿರ್ದಿಷ್ಟ ಉದ್ದೇಶದ್ದು ಮತ್ತು ಪ್ರತಿಸ್ಪರ್ಧಿಗಳ ಹಿತಕಾಯುವಂತಹದ್ದು ಎಂದು ರಿಲಯನ್ಸ್ ಹೇಳಿದೆ. ರಿಲಯನ್ಸ್ ವಿರುದ್ಧ ಅಪಪ್ರಚಾರವನ್ನೂ ಮಾಡಲಾಗುತ್ತಿದೆ ಎಂದು ಅದು ಆರೋಪಿಸಿದೆ.

ರಿಲಯನ್ಸ್‌ಗೆ ಸಂಬಂಧಿಸಿದ ಪ್ರಚಾರವಾಗುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ಕಾರ್ಪೊರೇಟ್ ಫಾರ್ಮಿಂಗ್‍ಗೆ ಮುಂದಡಿ ಇಡಲು ಯೋಜನೆಯಿಲ್ಲ ಎಂದು ರಿಲಯನ್ಸ್ ಹೇಳಿದೆ. ರಿಲಯನ್ಸ್ ರಿಟೇಲ್, ರಿಲಯನ್ಸ್ ಜಿಯೊ ಇನ್‍ಫೋಕಾಂ , ರಿಲಯನ್ಸ್ ಇಂಡಸ್ಟ್ರೀಸ್ ಸೇರಿ ಕೆಲಸ ಮಾಡುವ ಇತರ ಕಂಪೆನಿಗಳಿಗೆ ಕಾರ್ಪೊರೇಟ್ ಫಾರ್ಮಿಂಗ್, ಕಂಟ್ರಾಕ್ಟ್ ಫಾರ್ಮಿಂಗ್‍ಗೂ ಸಂಬಂಧವಿಲ್ಲ ಎಂದು ರಿಲಯನ್ಸ್ ತಿಳಿಸಿದೆ.

ರೈತ ಹೋರಾಟ ಆರಂಭಿಸುವುದರೊಂದಿಗೆ ಪಂಜಾಬ್, ಹರಿಯಾಣ ರಾಜ್ಯಗಳ ರಿಲಯನ್ಸ್ ಜಿಯೊ ಟವರ್‍ಗಳ ವಿದ್ಯುತ್ ಕಡಿತಗೊಳಿಸಿ ಕೇಬಲ್‍ಗಳನ್ನು ಕತ್ತರಿಸಲಾಗಿತ್ತು. ಜಿಯೊ ಮತ್ತು ರಿಲಯನ್ಸ್ ಪೆಟ್ರೋಲ್ ಬಂಕ್‍ಗಳಿಗೂ ನಷ್ಟಮಾಡಲಾಗಿದೆ. ಪಂಜಾಬ್‌ನಲ್ಲಿ 9000 ಟವರ್‍ಗಳಲ್ಲಿ 1500 ಟವರ್‍ಗಳ ಕೆಲಸ ಸ್ಥಗಿತವಾಗಿದೆ.