ಸಿಗದ ಪಿಪಿಇ ಕಿಟ್‌ಗಳು; ಕೋರ್ಟ್ ಮೆಟ್ಟಿಲೇರಿದ ವೈದ್ಯರು

0
553

ಸನ್ಮಾರ್ಗ ವಾರ್ತೆ

ಲಂಡನ್,ಜೂ.10: ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್‍ಗಳನ್ನು ಲಭ್ಯಗೊಳಿಸಲಾಗಿಲ್ಲ ಎಂದು ಆರೋಪಿಸಿ ಬ್ರಿಟಿನ್ ಸರಕಾರದ ವಿರುದ್ಧ ಎನ್‍ಎಚ್‍ಎಸ್ ವೈದ್ಯರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪಿಪಿಇ ಕಿಟ್‍ಗಳಿಗೆ ಆರ್ಡರ್ ನೀಡುವುದರಲ್ಲಾದ ಎಡವಟ್ಟು ಮಾಡಿಕೊಂಡ ಸಚಿವರ ವಿರುದ್ಧ ಬ್ರಿಟಿಷ್ ಹೈಕೋರ್ಟಿನಲ್ಲಿ ವೈದ್ಯರು ದಾವೆ ಹೂಡಿದ್ದು, ಹೆಲ್ತ್ ಸೆಕ್ರಟರಿ ಮ್ಯಟ್ ಹಾಂಕಾಮಗ್ ವಿರುದ್ಧ ಪ್ರಧಾನ ಆರೋಪಗಳನ್ನು ಎತ್ತಲಾಗಿದೆ.

ಘಟನೆಯ ಕುರಿರು ಸವಿವರ ತನಿಖೆ ನಡೆಸಬೇಕೆಂದು ವೈದ್ಯರು ಈ ಹಿಂದೆ ಬ್ರಿಟಿಷ್ ಸರಕಾರವನ್ನು ಒತ್ತಾಯಿಸಿದ್ದರು. ಆದರೆ, ಸರಕಾರ ಅದನ್ನು ತಿರಸ್ಕರಿಸಿತ್ತು. ತಸನಂತರ ವೈದ್ಯರು ಮತ್ತು ವಕೀಲರ ಸಂಘಟನೆ ಸರಕಾರದ ವಿರುದ್ಧ ಜ್ಯೂಡಿಶಿಯಲ್ ರಿವ್ಯೂ ಆಗ್ರಹಿಸಿ ಹೈಕೋರ್ಟಿನ ಮೆಟ್ಟಿಲೇರಿವೆ.

ವೈದ್ಯರು ಸಹಿತ ಸುಮಾರು 300ಕ್ಕೂ ಹೆಚ್ಚು ಎನ್‍ಎಚ್‍ಎಸ್ ಉದ್ಯೋಗಿಗಳು ಕೊರೋನ ಪೀಡಿತರಾಗಿ ಮೃತಪಟ್ಟಿದ್ದಾರೆ. ಮಾಸ್ಕ್, ಗೌನ್, ಗ್ಲೌಸ್, ಕನ್ನಡಕ ಪಿಪಿಇ ಕಿಟ್‍ಗಳಲ್ಲಿವೆ. ಇದು ಇಲ್ಲದಿದ್ದುರಿಂದ ಇಷ್ಟು ಮಂದಿ ಮೃತರಾಗಲು ಕಾರಣವಾಯಿತು ಎಂದು ಎನ್‍ಎಚ್‍ಎಸ್ ಉದ್ಯೋಗಿಗಳ ವಾದವಾಗಿದ್ದು ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ವೈದ್ಯರು ಸರಕಾರಕ್ಕೆ ಮುನ್ನೆಚ್ಚರಿಕೆಯನ್ನೂ ನೀಡಿದ್ದರು.

ಡಾಕ್ಟರ್ಸ್ ಅಸೋಸಿಯೇಶನ್ ಯುಕೆ ಗುಡ್ ಲಾ ಪ್ರಾಜೆಕ್ಟ್ ಕಾನೂನು ಕ್ರಮದ ಹಿಂದಿದ್ದು, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕಾನೂನು ಕ್ರಮವನ್ನು ಜರಗಿಸಲಾಗುತ್ತಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.