ಫ್ರಾನ್ಸ್ ಅಧ್ಯಕ್ಷರ ಇಸ್ಲಾಂ ವಿರೋಧಿ ಹೇಳಿಕೆಯನ್ನು ಖಂಡಿಸಿದ ನೋಬೆಲ್ ವಿಜೇತೆ ತವಕ್ಕುಲ್ ಕರ್ಮಾನ್‌

0
602

ಸನ್ಮಾರ್ಗ ವಾರ್ತೆ

ಸನ್‍ಆ,ಅ.9: ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೇಲ್ ಮ್ಯಾಕ್ರೋನ್‍ರ ಇಸ್ಲಾಮ್ ವಿರೋಧಿ ಹೇಳಿಕೆಯನ್ನು ನೋಬೆಲ್ ವಿಜೇತೆಯಾದ ಪ್ರಮುಖ ಮಾನವಹಕ್ಕು ಕಾರ್ಯಕರ್ತೆ ತವಕ್ಕುಲ್ ಕರ್ಮಾನ್ ಖಂಡಿಸಿದ್ದಾರೆ.

ಅವರ ಇಸ್ಲಾಮ್ ವಿರೋಧಿ ಹೇಳಿಕೆ ಅವರ ಅಸಹಿಷ್ಣುತೆ ದ್ವೇಷವನ್ನು ಹೊರಗೆ ತೋರಿಸುತ್ತಿದೆ. ಇದು ಫ್ರಾನ್ಸ್‌ನಂತ ಒಂದು ದೇಶದ ಮುಖ್ಯಸ್ಥನಿಗೆ ನಾಚಿಕೆಗೇಡು. ಧರ್ಮದಲ್ಲಿ ಸುಧಾರಣೆ ತರಬೇಕು ಎನ್ನುವುದರಲ್ಲಿ ಮ್ಯಾಕ್ರೋನ್ ಆತಂಕ ಪಡಬೇಕಿಲ್ಲ. ಅದು ಇಸ್ಲಾಮಿನ ವಿಷಯವಾಗಿದೆ. ಅದು ಅವರು ಮಾಡುತ್ತಾರೆ ಎಂದು ಕರ್ಮಾನ್ ಟ್ವೀಟ್ ಮಾಡಿದ್ದಾರೆ.

ಇಸ್ಲಾಮೀ ವಿಶ್ವಾಸಿಗಳಾದ ತನ್ನ ದೇಶದಲ್ಲಿರುವ ಗಣನೀಯ ಸಂಖ್ಯೆಯಲ್ಲಿರುವ ಒಂದು ವಿಭಾಗದ ವಿರುದ್ಧ ಮಾತಾಡುವುದರ ಬದಲು ಇಸ್ಲಾಮಿನ ಕುರಿತು ಗೌರವದಿಂದ ಅದರ ಸ್ವೀಕಾರಾರ್ಹತೆಯ ಕುರಿತು ಮಾತಾಡಲು ಶ್ರಮಿಸಬೇಕು.

ತವಕ್ಕುಲ್ ಕರ್ಮಾನ್

ಮುಸ್ಲಿಮರು ಮತ್ತು ಅವರ ಧರ್ಮದ ವಿರುದ್ಧ ಬೇಜವಾಬ್ದಾರಿಯ ಮತ್ತು ಪ್ರಚೋದಕ ಭಾಷಣವನ್ನು ಮ್ಯಾಕ್ರೋನ್ ಮಾಡಿದ್ದಾರೆ ಎಂದು ಕರ್ಮಾನ್ ಹೇಳಿದರು. ‘ಇಸ್ಲಾಂ’ ಫ್ರಾನ್ಸ್‌ನಲ್ಲಿ ಮಾತ್ರವಲ್ಲ ಜಗತ್ತಿನುದ್ದಕ್ಕೂ ಸಮಸ್ಯೆ ಎದುರಿಸುತ್ತಿರುವ ಒಂದು ಧರ್ಮವಾಗಿದೆ ಎಂದು ಕಳೆದ ವಾರ ಫ್ರೆಂಚ್ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದ್ದರು.