ಐತಿಹಾಸಿಕ ಶೃಂಗದಲ್ಲಿ ನೀಡಿದ ವಾಗ್ದಾನದಲ್ಲಿ ಅಮೆರಿಕ ಯಾವುದನ್ನೂ ಪಾಲಿಸಿಲ್ಲ: ಉತ್ತರ ಕೊರಿಯಾ ವಾಗ್ದಾಳಿ

0
372

ಸನ್ಮಾರ್ಗ ವಾರ್ತೆ

ಸೋಲ್,ಜೂ.12: ಸರಿಯಾಗಿ ಎರಡು ವರ್ಷ ಮೊದಲು ನಡೆದ ಐತಿಹಾಸಿಕ ಶೃಂಗದಲ್ಲಿ ನೀಡಿದ ವಾಗ್ದಾನದಲ್ಲಿ ಯಾವುದನ್ನೂ ಅಮೆರಿಕ ಪಾಲಿಸಿಲ್ಲ ಎಂದು ಉತ್ತರಕೊರಿಯಾ ಆರೋಪಿಸಿದೆ. 2012 ಜೂನ್ 12ಕ್ಕೆ ಕಿಂ ಜೊಂಗ್ ಉನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಶೃಂಗ ನಡೆದಿತ್ತು. ಇದರಲ್ಲಿ ಹೇಳಿದ ಒಂದೇ ಒಂದು ವಿಷಯವನ್ನೂ ಅಮೆರಿಕ ಕಾರ್ಯರೂಪಕ್ಕೆ ತಂದಿಲ್ಲ ಎಂದು ಉತ್ತರ ಕೊರಿಯದ ವಿದೇಶ ಸಚಿವ ರಿಝೋನ್ ಗ್ವಾನ್ ಬೆಟ್ಟು ಮಾಡಿದ್ದಾರೆ. ಟ್ರಂಪ್‌ರ ಅಮೆರಿಕದೊಂದಿಗೆ ಸೇರಿದರೆ ಏನಾದರೂ ಪ್ರಯೋಜನವಾಗುತ್ತದೆ ಎಂಬ ನಂಬಿಕೆ ನಮಗೆ ಇಲ್ಲ ಎಂದು ಅವರು ಹೇಳಿದರು.

ಎರಡು ದೇಶಗಳ ನಡುವೆ ಸಂಬಂಧವನ್ನು ಸಾಮಾನ್ಯ ರೀತಿಗೆ ತರುವುದು. ವಲಯದಲ್ಲಿ ಅಣುನಿಶಸ್ತ್ರೀಕರಣ ಜಾರಿಗೆ ತರುವುದು ಶೃಂಗದಲ್ಲಿ ಚರ್ಚೆಯಾಗಿತ್ತು. ಆದರೆ, ಅದರಲ್ಲಿ ಪ್ರಗತಿಯಾಗಿಲ್ಲ ಎಂದು ಕೊರಿಯ ಕೋಪ ವ್ಯಕ್ತಪಡಿಸಿದೆ. ನಂತರ ಕಿಮ್ ಮತ್ತು ಟ್ರಂಪ್ ಎರಡು ಸಲ ಭೇಟಿಯಾದರಾದರೂ ಒಪ್ಪಂದ ಸಾಧ್ಯವಾಗಿರಲಿಲ್ಲ.ಎಂದು ಗ್ವಾನ್ ಹೇಳಿದ್ದನ್ನು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.