ನಾರ್ವೆಯಲ್ಲಿ ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡ 23 ಮಂದಿ ಸಾವು

0
177

ಸನ್ಮಾರ್ಗ ವಾರ್ತೆ

ಓಸ್ಲೊ: ವಯಸ್ಸಾದವರು ಮತ್ತು ಗಂಭೀರ ರೋಗ ಇರುವವರಿಗೆ ಕೊರೋನಾ ವ್ಯಾಕ್ಸಿನ್ ವಿಪರೀತ ಪರಿಣಾಮ ಸೃಷ್ಟಿಸುತ್ತಿದೆ ಎಂದು ವರದಿಯಾಗಿದೆ.

ನಾರ್ವೆಯಲ್ಲಿ ಫೈಝರ್ ಕೊರೋನಾ ವ್ಯಾಕ್ಸಿನ್ ಮೊದಲ ಡೋಸ್ ಪಡೆದುಕೊಂಡವರಲ್ಲಿ ಅಲ್ಪ ಕಾಲಾವಧಿಯಲ್ಲಿಯೇ 23 ಮಂದಿ ಮೃತಪಟ್ಟಿದ್ದಾರೆ ಎಂದು ನಾರ್ವೆ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಮೃತರಲ್ಲಿ ಹೆಚ್ಚಿನವರಿಗೆ 80 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಮಾತ್ರವಲ್ಲ ವ್ಯಾಕ್ಸಿನ್ ತೆಗೆದುಕೊಂಡ ಹಲವಾರು ಜನರು ರೋಗಕ್ಕೆ ತುತ್ತಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸಾವಿನ ಕುರಿತು ತನಿಖೆ ನಡೆಯುತ್ತಿದ್ದು ವೈದ್ಯರ ಪ್ರಕಾರ 80 ವರ್ಷಕ್ಕೆ ಮೇಲ್ಪಟ್ಟವರು ವ್ಯಾಕ್ಸಿನ್ ಚುಚ್ಚು ಮದ್ದು ಹಾಕಿಸಿಕೊಳ್ಳುವುದು ಅಪಾಯಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವ್ಯಾಕ್ಸಿನ್ ಪಡೆದುಕೊಂಡ ನಂತರ ವಾಂತಿ, ತಲೆ ಸುತ್ತು, ಜ್ವರ ಕಾಣಿಸಿಕೊಂಡಿತ್ತು ಎಂದು ವರದಿಯಲ್ಲಿದೆ. ನಾರ್ವೆಯಲ್ಲಿ ಡಿಸೆಂಬರಿನಿಂದ 30,000 ಮಂದಿಗೆ ಫೈಝರ್ ವ್ಯಾಕ್ಸಿನ್ ಚುಚ್ಚಲಾಗಿದೆ.