ಪೌರತ್ವ ಪಟ್ಟಿಯಲ್ಲಿ ಮುಸ್ಲಿಮ್ ವಿರೋಧವೆಂಬುದಿಲ್ಲ, ತಿದ್ದುಪಡಿ ಮಸೂದೆ ತರಲಾಗುವುದು- ಅಮಿತ್ ಶಾ

0
6699

ಹೊಸದಿಲ್ಲಿ,ಅ.15: ಪೌರತ್ವ ಪಟ್ಟಿಯಲ್ಲಿ ಮುಸ್ಲಿಂ ವಿರೋಧವೆಂಬುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಪೌರತ್ವ ಪಟ್ಟಿಗೆ ಸಂಬಂಧಿಸಿದ ಕ್ರಮ ಸುಪ್ರೀಂಕೋರ್ಟಿನ ನಿರ್ದೇಶನದ ಆಧಾರದಲ್ಲಿ ಜಾರಿಗೊಳಿಸಿದ್ದು. ಈಗಿನ ಪೌರತ್ವ ಪಟ್ಟಿಯ ಸಮಸ್ಯೆಗಳನ್ನು ಕಂಡು ಹುಡುಕಿ ಪರಿಹರಿಸಿ ಲೋಪಗಳಿಲ್ಲದ ಪಟ್ಟಿಯಾಗಿ ಪರಿವರ್ತಿಸಲಾಗುವುದು ಮತ್ತು ದೇಶಾದ್ಯಂತ ಇದನ್ನು ಜಾರಿಗೊಳಿಸಲಾಗುವುದು ಎಂದು ಇಂಡಿಯಾ ಟುಡೆ ಗೆ ನೀಡಿದ ಸಂದರ್ಶನದಲ್ಲಿ ಅಮಿತ್ ಶಾ ಹೇಳಿದರು.

ಎಲ್ಲರನ್ನೂ ಭಾರತದಲ್ಲಿ ಇರಲು ಬಿಡುವಂತಿಲ್ಲ. ಕಾಂಗ್ರೆಸ್ ಒಮ್ಮೆಯೂ ಅನಧೀಕೃತ ವಲಸೆಯನ್ನು ತಡೆದಿಲ್ಲ. ಆದ್ದರಿಂದ ಅಂತಹ ಜನರನ್ನು ಗುರುತಿಸಿ ಮರಳಿ ಕಳುಹಿಸಲು ಕಾನೂನು ಪ್ರಕಾರ ಕ್ರಮ ಸ್ವೀಕರಿಸಬೇಕಾಗಿದೆ ಮತ್ತು ಪೌರತ್ವ ತಿದ್ದುಪಡಿ ಮಸೂದೆ ತರುತ್ತೇವೆ ಎಂದು ಅಮಿತ್ ಶಾ ಹೇಳಿದರು.

ಸಮಾನ ಸಿವಿಲ್ ಕೋಡ್ ಕುರಿತ ಪ್ರಶ್ನೆ ಬಹಳಷ್ಟು ವಿಷಯಗಳು ಪರಿಗಣನೆಯಲ್ಲಿದೆ ಸರಿಯಾದ ಸಮಯ ಹೇಳುವುದು ಕಷ್ಟವಿದೆ ಎಂದು ಅವರು ಹೇಳಿದರು.
ಕೇರಳ, ಮತ್ತು ಇತರ ರಾಜ್ಯಗಳಲ್ಲಿ ಯುವಕರ ನಡುವೆ ಪಾಪ್ಯುಲರ್ ಫ್ರಂಟ್ ಮೂಲಭೂತವಾದಿ ಚಟುವಟಿಕೆ ನಡೆಸುತ್ತಿದೆ ಎಂದು ತಿಳಿಯಿತು. ಪಾಪ್ಯುಲರ್ ಫ್ರಂಟ್ ಮಾತ್ರವಲ್ಲ ಯಾವುದೇ ಸಂಘಟನೆಗಳು ಅಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ಸರಕಾರ ತುಂಬ ಗಂಭೀರವಾಗಿ ಪರಿಗಣಿಸಲಿದೆ ಮತ್ತು ಅದನ್ನು ತಡೆಯಲು ಸಾಂವಿಧಾನಿಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.