ಆಂಧ್ರದೊಂದಿಗಿನ ಗಡಿ ವಿವಾದ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಓರಿಸ್ಸಾ

0
119

ಸನ್ಮಾರ್ಗ ವಾರ್ತೆ

ಭುವನೇಶ್ವರ: ಆಂಧ್ರಪ್ರದೇಶದೊಂದಿಗಿನ ಗಡಿ ವಿವಾದದಲ್ಲಿ ಒರಿಸ್ಸಾ ಸರಕಾರ ಸುಪ್ರೀಂಕೋರ್ಟಿನ ಮೊರೆ ಹೋಗಿದೆ. ಕೊರಪುತ್ ಜಿಲ್ಲೆಯ ಕೋಟ್ಟಿಯ ಮೂರು ಗ್ರಾಮ ಪಂಚಾಯತ್ ಚುನಾವಣೆಯ ನಡೆಸಲು ಆಂಧ್ರಪ್ರದೇಶ ಮುಂದಾಗಿದ್ದು ಇದನ್ನು ವಿರೋಧಿಸಿ ಓರಿಸ್ಸಾ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ. ಆಂಧ್ರಪ್ರದೇಶ ಚುನಾವಣೆ ನಡೆಸಲು ಬಯಸಿದ ಪ್ರದೇಶಗಳು ತಮಗೆ ಸೇರಿದ್ದೆಂದು ಓರಿಸ್ಸಾ ಹೇಳುತ್ತಿದೆ.

ಘಟನೆಗೆ ಸಂಬಂಧಿಸಿದ ಆಂಧ್ರ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಅಡ್ವೊಕೇಟ್ ಆನ್ ರೆಕಾರ್ಡ್ ಸಿಬೊ ಶಂಕರ್ ಮಿಶ್ರರನ್ನು ಸಂಪರ್ಕಿಸಿದೆ. ತಮ್ಮ ಭೂಪ್ರದೇಶ ಕೋಟದ ಗ್ರಾಮದಲ್ಲಿ ಚುನಾವಣೆ ನಡೆಸಲು ಆಂಧ್ರ ಪ್ರದೇಶ ಚುನಾವಣಾ ಆಯೋಗ ಪ್ರಕಟನೆ ಹೊರಡಿಸಿದೆ. ಈ ಪ್ರಕಟಣೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಸಲ್ಲಿಸಲು ಕಾನೂನು ಇಲಾಖೆಯ ಡೆಪ್ಯೂಟಿ ಸೆಕ್ರಟರಿ ಬಗ್‍ವಾನ್ ನಾಯಿಕ್ ಸಿಬೊ ಶಂಕರ್ ಮಿಶ್ರರಿಗೆ ಹೇಳಿದೆ.

ಕೆಲವು ದಿವಸಗಳ ಹಿಂದೆ ಆಂಧ್ರ ಪ್ರದೇಶ ಗಾಲೋಗಂಚಪಡಾ, ಪುಸಿನೊರಿ, ಫಗುಣ್‍ಸೆನೆ ಗ್ರಾಮ ಪಂಚಾಯತಿನ ಚುನಾವಣೆಗೆ ತೀರ್ಮಾನಿಸಿತ್ತು. ಈ ಪ್ರದೇಶಗಳು ಕೊಟ್ಟಿಯ ಗ್ರಾಮ ಪಂಚಾಯತ್‍ನ ವಿವಾದ ಸ್ಥಳವಾಗಿದ್ದು ಓರಿಸ್ಸಾ-ಆಂಧ್ರಪ್ರದೇಶಗಳ ನಡುವೆ ಬಹುಕಾಲದಿಂದ ಗಡಿ ವಿವಾದ ಮುಂದುವರಿಯುತ್ತಾ ಬಂದಿದೆ. 21 ಆದಿವಾಸಿ ಕೇರಿಗಳೂ ಈ ಪ್ರದೇಶದಲ್ಲಿವೆ.