ಪುನಃ ಪೆಟ್ರೋಲ್, ಡಿಸೇಲ್ ದರ ಏರಿಕೆ

0
475

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ:ಕಳೆದ ಶನಿವಾರ ಇಂಧನ ಬೆಲೆ ಏರಿಕೆಯ ನಂತರ ಸೋಮವಾರ ಪುನಃ ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ನವೆಂಬರ್ 19ರ ನಂತರ ನಿರಂತರ ಇಂಧನ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಅಂತಾರಾಷ್ಟ್ರಿಯ ಮಟ್ಟದಲ್ಲಿ ಕಚ್ಚಾ ತೈಲದರ ಹೆಚ್ಚಳವು ಭಾರತದಲ್ಲಿಯೂ ಪ್ರತಿಫಲನಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಕಚ್ಚಾ ತೈಲದ ಬೆಲೆ ಬ್ಯಾರಲಿಗೆ 65.57 ಡಾಲರ್ ಆಗಿದೆ. ಪೆಟ್ರೋಲ್ ಲೀಟರಿಗೆ 35 ಪೈಸೆ ಮತ್ತು ಡೀಸೆಲ್‍ಗೆ 37 ಪೈಸೆ ಹೆಚ್ಚಳವಾಗಿದೆ.

ದಿಲ್ಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 90.93ರೂ., ಡೀಸೆಲ್ 81.32ರೂ. ಮುಂಬೈಯಲ್ಲಿ ಪೆಟ್ರೋಲ್ 97.34ರೂ. ಡೀಸೆಲ್‍ಗೆ 88.44 ರೂ. ಆಗಿದೆ. ನಿರಂತರ ಹನ್ನೆರಡು ದಿವಸಗಳಿಂದ ಬೆಲೆ ಹೆಚ್ಚಳವಾಗಿದ್ದು ಕಳೆದ ದಿನ ಎರಡು ದಿವಸ ಬೆಲೆ ಹೆಚ್ಚಳವು ನಿಂತಿತ್ತು. ಈಗ ಅದು ಪುನಃ ಆರಂಭವಾಗಿದೆ.

ಫೆಬ್ರುವರಿಯಲ್ಲಿ ಪೆಟ್ರೋಲ್‍ಗೆ 4.91ರೂಪಾಯಿ ಹೆಚ್ಚಿದೆ. ಈ ವರ್ಷ ಇದುವರೆಗೆ 7.50ರೂಪಾಯಿ ಹೆಚ್ಚಳವಾಗಿದೆ. ಡೀಸೆಲ್‍ಗೆ ಫೆಬ್ರುವರಿಯಲ್ಲಿ 5.09ರೂಪಾಯಿ ಹೆಚ್ಚಳವಾಗಿದೆ. ಈ ವರ್ಷದಲ್ಲಿ 7.70 ರೂಪಾಯಿ ಹೆಚ್ಚಿದೆ. ರಾಜಸ್ಥಾನ ಮಧ್ಯಪ್ರದೇಶದಲ್ಲಿ ಪೆಟ್ರೋಲಿಗೆ 100ರೂಪಾಯಿ ದಾಟಿದ್ದು, ಇಂಧನಕ್ಕೆ ಅತ್ಯಂತ ಹೆಚ್ಚು ವ್ಯಾಟ್ ಈ ರಾಜ್ಯದಲ್ಲಿ ಹಾಕಲಾಗುತ್ತಿದೆ.

ಬೇರೆ ಬೆರೆ ರಾಜ್ಯಗಳಲ್ಲಿ ಸರಕು ಸಾಗಾಟದ ಪ್ರಕಾರ ದರ ವ್ಯತ್ಯಾಸವಿದೆ. ಕಳೆದ ಎಪ್ರಿಲ್, ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಇಂಧನ ಬೆಲೆ ಕಡಿಮೆ ಇದ್ದಾಗ ಅದರ ಲಾಭವನ್ನು ಜನರಿಗೆ ಸರಕಾರ ಕೊಟ್ಟಿಲ್ಲ. ನಂತರ ಇಂಧನ ಬೆಲೆ ಹೆಚ್ಚಿದಾಗ ತೆರಿಗೆ ಕಡಿಮೆ ಮಾಡಲು ಕೇಂದ್ರ ಸರಕಾರ ತಯಾರಾಗಿಲ್ಲ. ಪೆಟ್ರೋಲ್ ಬೆಲೆಯಲ್ಲಿ ಶೇ.60 ಮತ್ತು ಡೀಸೆಲ್‍ಗೆ ಶೇ.54ರಷ್ಟು ಕೇಂದ್ರ ರಾಜ್ಯಗಳು ತೆರಿಗೆ ಹಾಕುತ್ತಿವೆ.