ಒಲಿಂಪಿಕ್ಸ್ ಪದಕ ವಿಜೇತ ಅಮೆರಿಕಾದ ಮಹಿಳಾ ಸೈಕಲಿಸ್ಟ್ ಆತ್ಮಹತ್ಯೆ, ಕಾರಣ?

0
839

ನ್ಯೂಯಾರ್ಕ್, ಮಾ.12: ಅಮೆರಿಕದ ಸೈಕ್ಲಿಸ್ಟ್ ಮತ್ತು ಒಲಿಂಪಿಕ್ಸ್ ನಲ್ಲಿ ಮೂರು ಬಾರಿ ಬೆಳ್ಳಿ ಪದಕ ಗೆದ್ದಿದ್ದ ಕೆಲ್ಲಿ ಕ್ಯಾಟಲಿನ್ (23) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಕೆಲ್ಲಿ ಯಾಕೆ ಆತ್ಮಹತ್ಯೆ ಮಾಡಿಕೊಂಡರೆಂದು ಗೊತ್ತಾಗಿಲ್ಲ.

2016ರಿಂದ 2018ರವರೆಗೆ ನಿರಂತರ ಮೂರು ಒಲಿಂಪಿಕ್ಸ್ ನಲ್ಲಿಕೆಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಕ್ಯಾಟಲಿನ್‍ಗೆ ಲಭಿಸಿತ್ತು. ಸ್ಟಾನ್‍ಫೋರ್ಟ್ ಯುನಿವರ್ಸಿಟಿ ಸಂಶೋಧನಾ ವಿದ್ಯಾರ್ಥಿಯಾಗಿ ಕೆಲ್ಲಿ ವ್ಯಾಸಂಗ ಮಾಡುತ್ತಿದ್ದರು.