ಹಿಂದೂ ದೇವತೆಗಳ ಚಿತ್ರವಿರುವ ಪಟಾಕಿ ಮಾರಾಟ ಹಿನ್ನೆಲೆ: ಮುಸ್ಲಿಂ ವ್ಯಾಪಾರಿಗೆ ಬೆದರಿಕೆ

0
1442

ಸನ್ಮಾರ್ಗ ವಾರ್ತೆ

ಭೋಪಾಲ್; ಹಿಂದೂ ದೇವತೆಗಳ ಚಿತ್ರವಿರುವ ಸಿಡಿಮದ್ದುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಮಧ್ಯಪ್ರದೇಶದಲ್ಲಿ ಮುಸ್ಲಿಂ ವ್ಯಾಪಾರಿಗೆ ದುಷ್ಕರ್ಮಿಗಳು ಬೆದರಿಕೆ ನೀಡಿದ್ದಾರೆ. ಅಂಗಡಿಗೆ ದಾಳಿ ನಡೆಸಿ ವ್ಯಾಪಾರಿಯನ್ನು ಬೆದರಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲಾಗಿದೆ.

ಅಂಗಡಿಯಲ್ಲಿ ಹಿಂದೂ ದೇವತೆಗಳ ಚಿತ್ರ ಅಂಟಿಸಿರುವ ಪಟಾಕಿಗಳನ್ನು ಮಾರಾಟ ಮಾಡುವುದು ಮುಂದುವರಿಸಿದಲ್ಲಿ ಕ್ರೂರವಾದ ಪರಿಣಾಮ ಎದುರಿಸಬೇಕಾದೀತು ಎಂದು ದುಷ್ಕರ್ಮಿಗಳು ವಿಡಿಯೋದಲ್ಲಿ ಎಚ್ಚರಿಕೆ ನೀಡಿದ್ದಾರೆ.

ದಯಮಾಡಿ ಸಿಟ್ಟಾಗಬೇಡಿ. ನಾವು ಮಾರಾಟಗಾರರು ಮಾತ್ರ ತಯಾಕರಲ್ಲ  ಎಂದು ಅಂಗಡಿ ಮಾಲಿಕ ಸಾರಿ ಸಾರಿ ಕೇಳಿಕೊಳ್ಳುತ್ತಿದ್ದರು.

ದುಷ್ಕರ್ಮಿಗಳು ತೆರಳುವ ಮುನ್ನ ಪ್ರವಾದಿ ಮಹಮ್ಮದ(ಸ)ರ ಕಾರ್ಟೂನ್ ಪ್ರದರ್ಶಿಸಿದ ಫ್ರೆಂಚ್ ಘಟನೆಯ ಕುರಿತಾಗಿಯೂ ಹೇಳಿಕೊಂಡಿದ್ದಾರೆ.

“ಮುಸ್ಲಿಮರು ದೇಶಕ್ಕೆ ವಿರುದ್ಧವಾದರೆ, ನಾವು ನಿಮಗೆ ವಿರುದ್ಧ” ಎಂದು ದುಷ್ಕರ್ಮಿಗಳಲ್ಲೊಬ್ಬ ಹೇಳಿದ್ದ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ ಪರ-ವಿರೋಧ ಚರ್ಚೆಗಳೂ ಕಂಡು ಬಂದಿದೆ.