ಒಂದು ಮಗುವಿನ ಮೈಯಲ್ಲಿ ರಕ್ತ, ಇನ್ನೊಂದು ಮಗು ಮಾತೇ ಆಡದೆ ಸುಮ್ಮನೆ ಮಲಗಿದೆ

0
207

ಉಮ್ಮು ರಮಿನ್ ಯೂಸುಫ್

ಮನೆಯ ಗೇಟ್ ತೆರೆದು ಒಳಹೋದರೆ ಮಗು ಎದುರಿಗಿತ್ತು. ಅಲ್ಲಲ್ಲಿ ರಕ್ತ! ಅಯ್ಯೋ ನನ್ ಮಗು! ಎನ್ನುತ್ತಾ ಮಗುವನ್ನೆತ್ತಿ ಮನಯೊಳಗೆ ಓಡಿದ ನನ್ನನ್ನು ಸ್ವಾಗತಿಸಿದ್ದು ಮೌನ… ಮನೆಯಿಡೀ ಮೌನ.

ತನ್ನ ಮುದ್ದು ಮಾತುಗಳಿಂದ ಮನೆ ಮಂದಿಯನ್ನು ರಂಜಿಸುತ್ತಿದ್ದ ಮಗು ಸೊಫಾದಲ್ಲಿ ಸುಮ್ಮನೆ ಮಲಗಿತ್ತು. ಇದೇನಾಗಿದೆ ನನ್ನ ಮಕ್ಕಳಿಗೆ..??

ಒಂದು ಮಗುವಿನ ಮೈಯಲ್ಲಿ ರಕ್ತ, ಇನ್ನೊಂದು ಮಗು ಮಾತೇ ಆಡದೆ ಸುಮ್ಮನೆ ಮಲಗಿದೆ..ಅಮ್ಮಾ! ಈ ಜಗತ್ತು ಇಷ್ಟು ಕ್ರೂರವಾಗಿದೆಯೇ..ಇಷ್ಟು ಅಸಹ್ಯವಾಗಿದೆಯೇ?? ಎಂದು ಕಣ್ಣಲ್ಲೇ ಕೇಳುತ್ತಿರುವಂತೆ ನನ್ನನ್ನು ನೋಡುತ್ತಿತ್ತು. ಅಯ್ಯೋ..! ಯಾರದೋ ಕೆಟ್ಟ ದೃಷ್ಟಿಗೆ ಬಲಿಯಾಗಿದೆ ಮನೆಯ ಎರಡು ಮಕ್ಕಳು…ನನ್ನ ದೇಹವಿಡೀ ಹೃದಯಗಳಿದ್ದು.. ಆ ಹೃದಯಗಳೆಲ್ಲವೂ ನೋಯುತ್ತಿರುವ ಅನುಭವ.. ಎಲ್ಲಾ ಶಕ್ತಿ ಉಪಯೋಗಿಸಿ ಅಳುತ್ತಿದ್ದರೂ ಶಬ್ಧ ಹೊರ ಬರುತ್ತಿರಲಿಲ್ಲ. ಮನೆಯಲ್ಲಿ ಯಾರೂ ಮಾತೂ ಆಡುತ್ತಿರಲಿಲ್ಲ.

ತಲೆಗೆ ಹುಚ್ಚು ಹಿಡಿದಂತೆ ಒಳಗೆ ಹೊರಗೆ ಓಡಿದೆ. ಮನೆಯ ಹಿಂದಿನ ಕಿಟಕಿಯಿಂದ ಕಣ್ಣಾಯಿಸಿದಾಗ ಕಾಣುತ್ತಿದ್ದ ಪುರುಷರು, ನಮಗಾದ ನೋವಿಗೆ ಅಲ್ಪವೂ ಕನಿಕರ ಇಲ್ಲವೆಂಬಂತೆ ನಿಂತಿದ್ದರು. ಆ ದೃಶ್ಯ ಸಹಿಸಿಕೊಳ್ಳಲಾಗದೆ ಮುಂದಿನ ಅಂಗಳಕ್ಕೆ ಬಂದಾಗ, ನಮಗಾದ ನೋವಿಗೆ ಸಂತಾಪ ಸೂಚಿಸುವಂತೆ ತುಂಬಾ ಮಂದಿ ಸೇರಿದ್ದರು. ಅವರು ಬಹಳ ಕಾಳಜಿಯಿಂದ, ದುಃಖದಿಂದ ಇದ್ದಂತೆ ಕಂಡಿತು. ನನಗಾದರೋ ಕೈಗೆ ಸಿಕ್ಕವರನ್ನು ಕೊಂದುಬಿಡಬೇಕೆನ್ನುವಷ್ಟು ನೋವು, ಕೋಪ….

ದುಃಸ್ವಪ್ನ.. ಖಂಡಿತ ಇದು ನನ್ನ ದುಃಸ್ವಪ್ನ! ಮಗು, ಮಕ್ಕಳು, ಹೆಣ್ಣು.,ಮಹಿಳೆ ಸಾಕಗಿಲ್ಲದಕ್ಕೆ ವೃದ್ಧೆಯೂ ದುಷ್ಟ, ಕೆಟ್ಟ, ಪೈಶಾಚಿಕ ದೃಷ್ಟಿಗೆ ಒಳಗಾಗುತ್ತಿರುವಾಗ ನಮ್ಮನೆ ಮಕ್ಕಳ ಮೇಲೂ ಆ ದೃಷ್ಟಿ ಬಿದ್ದಂತಹ ದುಃಸ್ವಪ್ನಗಳು ಬರುವುದು ಸಹಜ ತಾನೇ..?
ಇಂದು *’Breaking news’* ಆಗುತ್ತಿರುವ ದುಃಸ್ವಪ್ನದಂತಹ ಭಯಾನಕತೆಗಳು ಮುಂದೆ, ‘ಮನೆಯಲ್ಲಿ ಕಳ್ಳತನ’ ಎಂದು ಸಣ್ಣದಾಗಿ ಸುದ್ದಿಯಾಗುವಂತೆ *’ಮಾನ ಕಳ್ಳತನ’* ಎಂದು ಸುದ್ದಿಯಾಗುವಷ್ಟು ಸಾಮಾನ್ಯವಾಗುತ್ತಿದೆ ಪೈಶಾಚಿಕ ಅಟ್ಟಹಾಸಗಳು.

ನ್ಯಾಯಾಲಯಗಳೂ, ಪೋಲಿಸರೂ *’so-called’* mob lynch ಗೆ ಬಲಿಯಾಗುತ್ತಿರುವ ನನ್ನ ಭಾರತದಲ್ಲಿ ದುಃಸ್ವಪ್ನಗಳೇ ಹೊರತು ಭಾರತಕ್ಕಾಗಿ ಕನಸು ಕಾಣಲು ಭಾರತೀಯರಿಗೆ ಸಾಧ್ಯವಾಗುತ್ತಿಲ್ಲವೇನೋ..!?