ಈರುಳ್ಳಿ ರಫ್ತು ನಿಷೇಧ ಹೇರಿದ ಬೆನ್ನಿಗೆ 28% ರಷ್ಟು ದರ ಹೆಚ್ಚಳ

0
178

ಸನ್ಮಾರ್ಗ ವಾರ್ತೆ

ನವದೆಹಲಿ: ಭಾರತದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಮಹಾರಾಷ್ಟ್ರದ ಲಸಲ್‌ಗಾಂವ್‌ನಲ್ಲಿ ಈರುಳ್ಳಿ ಬೆಲೆ 28% ರಷ್ಟು ಏರಿಕೆಯಾಗಿದೆ. ಜನವರಿ 1 ರಿಂದ ಜಾರಿಗೆ ಬರುವಂತೆ ತರಕಾರಿ ರಫ್ತು ಮೇಲಿನ ನಿಷೇಧವನ್ನು ಸರ್ಕಾರವು ಸೋಮವಾರ ಘೋಷಿಸಿದ ಬೆನ್ನಿಗೆ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಇದರೊಂದಿಗೆ ಬುಧವಾರ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ಸರಾಸರಿ 32,500 ಕ್ಕೆ ಏರಿದೆ. ಕೇಂದ್ರ ಸರಕಾರ ಸೆಪ್ಟೆಂಬರ್ ತಿಂಗಳಿ‌ನಲ್ಲಿ ಈರುಳ್ಳಿ ರಫ್ತು ನಿಷೇಧಿಸಿತ್ತು.