ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿದ ಸರಕಾರ: ತಮಿಳ್ನಾಡಿನಲ್ಲಿ ಆನ್‍ಲೈನ್ ಜೂಜು ನಿಷೇಧ

0
188

ಸನ್ಮಾರ್ಗ ವಾರ್ತೆ

ಚೆನ್ನೈ,ನ. 21: ತಮಿಳ್ನಾಡಿನಲ್ಲಿ ಆನ್‍ಲೈನ್ ಜೂಜು ನಿಷೇಧಿಸಲಾಗಿದೆ. ಇದಕ್ಕಾಗಿ ಸರಕಾರ ವಿಶೇಷ ಸುಗ್ರಿವಾಜ್ಞೆ ಹೊರಡಿಸಿದೆ. ಸುಗ್ರಿವಾಜ್ಞೆಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ ಸಹಿ ಹಾಕಿದ್ದಾರೆ. ಆನ್‍ಲೈನ್ ಜೂಜು ನಡೆಸುವವರಿಗೆ ಇನ್ನು 5000ರೂ ದಂಡ. ಆರು ತಿಂಗಳ ಜೈಲಿನಿಂದ ಹಿಡಿದು ಎರಡು ವರ್ಷ ಜೈಲುಶಿಕ್ಷೆ ಲಭಿಸಲಿದೆ.

ಆನ್‍ಲೈನ್ ಜೂಜು ಕೇಂದ್ರ ನಡೆಸುವವರಿಗೆ 10,000 ರೂಪಾಯಿ ದಂಡ, ಎರಡು ವರ್ಷ ಜೈಲು ಶಿಕ್ಷೆ ಸಿಗಲಿದೆ.

ಆನ್‍ಲೈನ್ ಜೂಜಾಟದಲ್ಲಿ ಹಣ ಕಳಕೊಂಡು ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದು ಜನರಿಂದ ಆನ್‍ಲೈನ್ ಜೂಜಾಟ ರದ್ದುಪಡಿಸಬೇಕೆಂಬ ಬಲವಾದ ಆಗ್ರಹ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತಮಿಳ್ನಾಡು ಸರಕಾರ ಕ್ರಮ ಜರಗಿಸಿದೆ. ಸರಕಾರ ಸುಗ್ರಿವಾಜ್ಞೆ ಮೂಲಕ ಆನ್ ಲೈನ್ ಜೂಜಾಟ ರದ್ದುಪಡಿಸಿದೆ.