ಬಾಲಕೋಟ್ ದಾಳಿ ಐದು ಮಂದಿಗೆ ಮಾತ್ರ ಗೊತ್ತಿತ್ತು; ಮಾಹಿತಿ ಸೋರಿಕೆ ಮಾಡಿದವರು ಆರೋಪಿಗಳು

0
3038

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟದ ಹಿರಿಯರಿಗೆ ಮಾತ್ರ 2019ರ ಬಾಲಕೋಟ್ ದಾಳಿ ಮೊದಲೇ ಗೊತ್ತಿದ್ದವರಲ್ಲಿ ಒಬ್ಬರು ಪ್ರಜ್ಞಾಪೂರ್ವಕವಾಗಿ ರಿಪಬ್ಲಿಕ್ ಟಿವಿ ಎಡಿಟರ್ ಅರ್ನಾಬ್ ಗೋಸ್ವಾಮಿಗೆ ವಿವರ ನೀಡಿದ್ದಾರೆ. ಇದು ಕ್ರಿಮಿನಲ್ ಅಪರಾಧ, ಮಾಹಿತಿ ಕೊಟ್ಟವರು ಮಾತ್ರವಲ್ಲ ಸ್ವೀಕರಿಸಿದವರನ್ನೂ ಕಾನೂನಿನ ಮುಂದೆ ನಿಲ್ಲಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸರಿಯಾಗಿ ಹೇಳುವುದಾದರೆ ಅದು ನಾಲ್ಕೋ ಐದೋ ಜನರಿಗೆ ಗೊತಿತ್ತು. ಪ್ರಧಾನಿ, ಗೃಹ ಸಚಿವರು, ಏರ್‍ಚೀಫ್ ಸ್ಟಾಫ್, ಎನ್‍ಎಸ್‍ಎ. ಇವರಲ್ಲಿ ಒಬ್ಬರು ಅರ್ನಬ್‍ಗೆ ವಿವರ ನೀಡಬಹುದು. ನಿಜವಾದ ಕಾರಣಕರ್ತರು ಯಾರೆಂದು ತನಿಖೆ ನಡೆಯಬೇಕಾಗಿದೆ. ವಿವರವನ್ನು ಪ್ರಧಾನಿಯೂ ನೀಡಲು ಸಾಧ್ಯವಾಗಬಹುದು. ಆದ್ದರಿಂದ ತನಿಖೆ ನಡೆಯುವುದು ಅನಿವಾರ್ಯವಾಗಿದೆ. ಆದರೆ ಆ ಪ್ರಕ್ರಿಯೆ ನಡೆಯಬಹುದು ಎಂದು ಅನಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

ವಾಟ್ಸಪ್ ಚ್ಯಾಟ್‍ಗಳಲ್ಲಿ ಕಂಪಿಸುವ ವಿವರಗಳನ್ನು ಕಾಣುತ್ತಿದ್ದೇವೆ. ಒಬ್ಬರು ಹೇಳುತ್ತಾರೆ: ಸಿಆರ್‍ಪಿಎಫ್ ಯೋಧರನ್ನು ಕೊಲ್ಲುವುದು ನಮಗೆ ತುಂಬ ಪ್ರಯೋಜನವಾಗಲಿದೆ(ಬಾರ್ಕ್ ಮಾಜಿ ಮುಖ್ಯಸ್ಥ ಪಾರ್ಥೊ ದಾಸ್‍ಗುಪ್ತರು ವಾಯುದಾಳಿಯನ್ನು ಚುನಾವಣೆಯಲ್ಲಿ ಲಾಭವಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ). ಸರಿಯಾಗಿ ಇದೆಲ್ಲ ದೇಶದ್ರೋಹವಾಗಿದೆ.

ಕೃಷಿ ಕಾನೂನು ರೈತರಿಗೆ ಮಾತ್ರವಲ್ಲ ತೊಂದರೆ ನೀಡುವುದಲ್ಲ. ಒಟ್ಟು ಮಧ್ಯಮವರ್ಗ ಇದರ ಬಲಿಪಶು ಎನಿಸಿಕೊಳ್ಳಲಿದ್ದಾರೆ. ಈಗಿನ ಪರಿಸ್ಥಿತಿ ಮಾತ್ರ ಇಲ್ಲಿನ ವಿಷಯವಲ್ಲ. ಭವಿಷ್ಯದಲ್ಲಿ ನಿಮಗೆ ಏನಾಬಹುದು ಎನ್ನುವುದರ ಜೊತೆಗೆ ಆರ್ಥಿಕ ಪ್ರಗತಿಯಾಗಿ ಜಗತ್ತಿನ ಮುಂದೆ ಎದ್ದು ನಿಲ್ಲಲು ಮತ್ತು ಪ್ರಜೆಗಳಿಗೆ ಉದ್ಯೋಗವಕಾಶ ಒದಗಿಸುವ ಪರಿಸ್ಥಿತಿ ದೇಶಕ್ಕಾಗಬಹುದೇ ಎಂಬುದು ಸಮಸ್ಯೆಯಾಗಿದೆ ಎಂದು ರಾಹುಲ್ ಹೇಳಿದರು.

3-4 ಬಂಡವಾಳ ಶಾಹಿಗಳ ಕೈಗಳಲ್ಲಿ ದೇಶ ಸಿಕ್ಕಿಹಾಕಿಕೊಂಡಿದೆ. ಅವರ ರೈತರ ವ್ಯವಸಾಯವನ್ನು ಕಿತ್ತುಕೊಳ್ಳುವ ಗುರಿಯಿಟ್ಟುಕೊಂಡಿದ್ದಾರೆ. ಸರ್ವಾಧಿಕಾರಿ ಆಡಳಿತದಿಂದ ದೇಶವನ್ನು ಕಾಯುತ್ತಿರುವ ಕೊನೆಯ ಶಕ್ತಿಕೋಟೆ ರೈತಕ್ಷೇತ್ರವಾಗಿದೆ. ಅದರ ಮೇಲೆ ಮುಷ್ಠಿ ಬಿದ್ದಾಯಿತು. ಮೂರು ನಾಲ್ಕು ಉದ್ಯಮಿಗಳು ಲಕ್ಷಾಂತರ ಸರಕುಗಳನ್ನು ಸ್ವಂತದ್ದಾಗಿಸುವರು. ಅದಕ್ಕೆ ಮಧ್ಯಮ ವರ್ಗ ಬಳಕೆದಾರ ಬೆಲೆ ತೆರಬೇಕಾಗಿರುವುದು ಊಹೆಯನ್ನು ಮೀರಿದ ಬೃಹತ್ ನಷ್ಟವಾಗಿದೆ.

ಈಗಿನ ಬೆಲೆಗೆ ಅಕ್ಕಿ ಸಿಗುತಿರುವುದು ಎಪಿಎಂಸಿ ಇರುವುದರಿಂದ ಆದ್ದರಿಂದಲೇ ಈಗ ನಡೆಯುತ್ತಿದೆ. ರೈತರು ಕೂಡ ಬಲಿಯಾಗುವ ದಾಳಿಯಿದು. ಇನ್ನೊಂದು, ಬಿಜೆಪಿ ಅಧ್ಯಕ್ಷ ತನ್ನ ಮೇಲೆ ಪ್ರಶ್ನೆಗಳ ಬಾಣ ಎಸೆಯುತ್ತಿದ್ದಾರೆ. ಅದಕ್ಕೆ ಉತ್ತರಕೊಡಲು ಆತ ಯಾರು! ನನ್ನ ಪ್ರೊಫೆಸರಲ್ಲ. ರೈತರಿಗೆ ಗೊತ್ತಿದೆ ನನ್ನ ಬಗ್ಗೆ. ನಾನು ಅವರ ಜೊತೆ ನಿಂತಿರುವೆ.
ದೇಶದ ಮುಂದೆ ಒಂದು ದುರಂತವಿದೆ. ಸರಕಾರ ಈ ವಿಷಯವನ್ನು ಕಡೆಗಣಿಸಲು ಮುಂದಾಗಿದೆ. ದೇಶವನ್ನು ತಪ್ಪುಕಲ್ಪನೆಗಳಿಗೆ ದೂಡುತ್ತಿದೆ. ರೈತರು ಮಾತ್ರವಲ್ಲ ನನ್ನ ಆತಂಕವಿರುವುದು. ಅವರು ಈ ದುರಂತದ ಒಂದು ಭಾಗ ಮಾತ್ರ ಆಗಿದ್ದಾರೆ. ಯುವಕರಿಗೆ ಇದು ಮುಖ್ಯವಾಗಿದೆ. ಇದು ವರ್ತಮಾನಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ನಿಮ್ಮ ಭವಿಷ್ಯದ್ದು ಕೂಡಾ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.