ಕಾಶ್ಮೀರದಲ್ಲಿ ಕಠಿಣ ಪರಿಸ್ಥಿತಿ ಇದೆ : ಡೊನಾಲ್ಡ್ ಟ್ರಂಪ್

0
597

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.20: ಕಾಶ್ಮೀರದ ಪರಿಸ್ಥಿತಿ ಕಠಿಣವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಪರಸ್ಪರ ಘರ್ಷಣೆಗಿಳಿಯದೆ ಭಾರತ,ಪಾಕಿಸ್ತಾನ ಚರ್ಚೆಯ ಮೂಲಕ ಸಮಸ್ಯೆ ಬಗೆಹರಿಸಬೇಕು. ಭಾರತ ಪಾಕಿಸ್ತಾನ ಅಮೆರಿಕದ ಉತ್ತಮ ಮಿತ್ರರು.ಈ ಕುರಿತು ಭಾರತ, ಪಾಕಿಸ್ಥಾನದ ಪ್ರಧಾನಿಗಳೊಂದಿಗೆ ಮಾತಾಡಿದ್ದೇನೆಂದೂ ಟ್ರಂಪ್ ತಿಳಿಸಿದರು.

ಭಾರತ,ಪಾಕಿಸ್ತಾನ ಪರಸ್ಪರ ಘರ್ಷಣೆಯ ಸ್ಥಿತಿಗೆ ಬಂದು ನಿಂತಿದೆ. ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‍ರೊಂದಿಗೆ ಫೋನ್ ಮುಖಾಂತರ ಮಾತನಾಡಿರುವೆ ಎಂದಿರುವ ಟ್ರಂಪ್ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನವನ್ನು ತೆರವುಗೊಳಿಸಿ ಎರಡು ಕೇಂದ್ರಾಡಳಿ ಪ್ರದೇಶ ಮಾಡಿದ್ದು ನೆರೆಹೊರೆಯ ಘರ್ಷಣೆಯ ವಿಷಯವಾಯಿತು ಎಂದೂ ಹೇಳಿದರು.

ಪಾಕಿಸ್ತಾನದ ಪ್ರಧಾನಿಯೊಂದಿಗೆ ಮಾತಾಡಿದ ಟ್ರಂಪ್ ಸಂಘರ್ಷಕ್ಕೆ ತೆರಳದೆ ಚರ್ಚೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಹೇಳಿದರು. ಸಮಸ್ಯೆ ಪರಿಹಾರದಲ್ಲಿ ಅಮೆರಿಕ ಮಧ್ಯಸ್ಥಿತಿಕೆ ವಹಿಸಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿ ಪಾಕ್ ವಿದೇಶ ಸಚಿವ ಶಾಮೆಹ್ಮೂದ್ ಕುರೇಶಿ ಟ್ವೀಟ್ ಮಾಡಿದ್ದಾರೆ. ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಟ್ರಂಪ್ ಸಿದ್ಧ ಎಂದಿದ್ದು ಭಾರತ ಇದನ್ನು ನಿರಾಕರಿಸಿದ ಬಳಿಕ ಇದೇ ಮೊದಲ ಬಾರಿ ಮೂವತ್ತು ನಿಮಿಷದ ಮೋದಿ-ಟ್ರಂಪ್ ಚರ್ಚೆ ನಡೆದಿದೆ.

ಈಗಿನ ಪರಿಸ್ಥಿತಿಯಲ್ಲಿ ಪಾಕಿಸ್ತಾನದೊಂದಿಗೆ ಚರ್ಚೆ ಸಾಧ್ಯವಿಲ್ಲ ಎಂದು ಕಳೆದ ದಿವಸ ರಾಜ್‍ನಾಥ್ ಸಿಂಗ್ ಹೇಳಿದ್ದರು. ಕಾಶ್ಮೀರದಲ್ಲಿ ಭಾರತ ವಿರುದ್ಧ ದಾಳಿ ಪ್ರೋತ್ಸಾಹಿಸುವ ನಿಲುವು ವಲಯದಲ್ಲಿದೆ ಎಂದು ಮೋದಿ ಟ್ರಂಪ್‍ಗೆ ಹೇಳಿದ್ದಾರೆ ಎಂದು ವಿದೇಶ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ವಾತಾವರಣ ಶಾಂತಿ ಮಾತುಕತೆಗೆ ಪೂರಕವಲ್ಲ. ಚರ್ಚೆ ನಡೆಯಬೇಕಾದರೆ ಭಯೋತ್ಪಾದಕ ವಾತಾವರಣದಲ್ಲಿ ಬದಲಾವಣೆಯಾಗುವುದು ಮುಖ್ಯ ಎಂದು ಮೋದಿ ಹೇಳಿರುವುದಾಗಿ ವಿದೇಶ ಸಚಿವಾಲಯ ವಿವರಿಸಿದೆ.