ಅನಗತ್ಯ ಯೋಜನೆಗಳಲ್ಲಿ ನಿಧಿಯನ್ನು ಪೋಲು ಮಾಡದಿರಲು ನಿರ್ಧಾರ: ಚೀನಾದ ಸಿಪಿಈಸಿ ವಿದ್ಯುತ್ ಯೋಜನೆಯಿಂದ ಹಿಂದೆ ಸರಿದ ಪಾಕಿಸ್ತಾನ

0
483

ಇಸ್ಲಾಮಾಬಾದ್‌ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ರವರ ಕಾಲಾವಧಿಯಲ್ಲಿ ಮುಂದೂಡಲ್ಪಟ್ಟಿದ್ದ ಚೀನಾ-ಪಾಕಿಸ್ತಾನ್ ಇಕಾನಮಿಕ್‌ ಕಾರಿಡಾರ್‌ (CPEC) ಯೋಜನೆಯಿಂದ ಹಿಂದೆ ಸರಿಯಲು ಪಾಕಿಸ್ತಾನದ ಸರಕಾರವು ನಿರ್ಧರಿಸಿದೆ. ಸರಕಾರವು ನಡೆಸಿದ ಚರ್ಚೆಗಳ ಮೇರೆಗೆ ಇಸ್ಲಾಮಾಬಾದ್ ಕಛೇರಿಯಲ್ಲಿ ಈ ನಿರ್ಧಾರವು ಹೋರ ಬಿದ್ದಿದ್ದು ಬೀಜಿಂಗ್ ನ ಸರಕಾರಿ ನಿರ್ದೇಶನಕ್ಕೆ ಈ ಕುರಿತು ಮಾಹಿತಿಯನ್ನು ಈಗಾಗಲೇ ನೀಡಿರುವುದಾಗಿ ತಿಳಿಸಿದೆ.

ಸಿಪಿಈಸಿ ಯ  1,320MW ವಿದ್ಯುತ್ ಉತ್ಪಾದನಾ ಯೋಜನೆಯಾಗಿದ್ದ ರಹೀಂ ಯಾರ್‌ ಖಾನ್‌ ವಿದ್ಯುತ್‌ ಯೋಜನೆಯಲ್ಲಿ ಪಾಕಿಸ್ತಾನ ಸರಕಾರಕ್ಕೆ ಯಾವುದೇ ಆಸಕ್ತಿ ಇಲ್ಲದಿರುವುದಾಗಿ ಅದು ಹೇಳಿಕೊಂಡಿದ್ದು, ಮುಂದಿನ ಕೆಲವು ವರ್ಷಗಳಿಗೆ ಬೇಕಾಗುವಷ್ಟು ವಿದ್ಯುತ್ತಿನ ಉತ್ಪಾದನೆಯನ್ನು ಹೊಂದಿರುವುದಾಗಿ ಪಾಕಿಸ್ತಾನ ಸರಕಾರವು ತಿಳಿಸಿದೆ.

ಆದುದರಿಂದ ಈ ಯೋಜನೆಯನ್ನು ತಡೆಹಿಡಿಯುವಂತೆ ತಿಳಿಸಿದ್ದು ಈ ಪಟ್ಟಿಯಿಂದ ತನ್ನ ಹೆಸರನ್ನು ತೆಗೆದು ಹಾಕುವಂತೆ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಾಕ್‌ ಸರಕಾರ ಚೀನಾಕ್ಕೆ ತಿಳಿಸಿದೆ.

ಕಳೆದ ತಿಂಗಳು ನಡೆದ ಎಂಟನೆಯ ಜಂಟಿ ಸಮನ್ವಯ ಸಮಿತಿಯಲ್ಲಿ ಭಾಗವಹಿಸಿದ ಯೋಜನಾ ಮತ್ತು ಅಭಿವೃದ್ಧಿ ಸಚಿವರಾದ ಮಖ್ದೂಮ್ ಖುಸ್ರೋ ಭಕ್ತ್ಯಾರ್ ರವರ ಅಧ್ಯಕ್ಷೀಯ ನಿಯೋಗವು ರಹೀಮ್ ಯಾರ್ ಖಾನ್ ಯೋಜನೆಯ ಸಿಪಿಈಸಿ ಪಟ್ಟಿಯಿಂದ ಪಾಕಿಸ್ತಾನದ ಹೆಸರನ್ನು ತೆಗೆದು ಹಾಕುವಂತೆ ಮನವಿ ಸಲ್ಲಿಸಿದ್ದಾಗಿ ಸರಕಾರಿ ಮೂಲಗಳು ತಿಳಿಸಿದ್ದವು.

“ಸರಕಾರವು ಅನಗತ್ಯ ಯೋಜನೆಗಳಲ್ಲಿ ಸಾರ್ವಜನಿಕ ನಿಧಿಯನ್ನು ಪೋಲು ಮಾಡುವುದನ್ನು ನಿಲ್ಲಿಸುವ ಸಲುವಾಗಿ ಹೆಚ್ಚಿನ ಯೋಜನೆಗಳನ್ನು ಪುನರ್ ಪರಿಶೀಲನೆ ಗೊಳಪಡಿಸಲಾಗುವುದು ಮತ್ತು ಈ ನಿಧಿಯನ್ನು ಜನೋಪಯೋಗಿ ಯೋಜನೆಗಳಲ್ಲಿ ಉಪಯೋಗಿಸಲು ಸರಕಾರವು ನಿರ್ಧರಿಸಲಿದೆ.ಎಂದು ಸಂಸತ್ ವಕ್ತಾರರು ತಿಳಿಸಿರುವುದಾಗಿ ಡಾನ್ ವರದಿಯು ತಿಳಿಸಿದೆ.