ಬಿಜೆಪಿಯಿಂದ ದೂರವಾಗುವ ಸೂಚನೆ ನೀಡಿದ ಪಂಕಜಾ ಮುಂಢೆ

0
923

ಸನ್ಮಾರ್ಗ ವಾರ್ತೆ-

ಮುಂಬೈ, ಡಿ. 2: ಮಹಾರಾಷ್ಟ್ರ ಬಿಜೆಪಿಯ ಮಹಿಳಾ ಪ್ರಭಾವಿ ನಾಯಕಿ ಪಂಕಜಾ ಮುಂಢೆ ಪಾರ್ಟಿ ತೊರೆಯುವ ಸೂಚನೆ ನೀಡಿದ್ದಾರೆ. ಅವರು ಫೇಸ್‍ಬುಕ್‍ನಲ್ಲಿ ತನ್ನ ಮನಪರಿವರ್ತನೆಯ ವಿಚಾರವನ್ನು ಹೇಳಿದ್ದಾರೆ. ಡಿಸೆಂಬರ್ ಹನ್ನೆರಡರೊಳಗೆ ತನ್ನ ತೀರ್ಮಾನ ತಿಳಿಸುವುದಾಗಿ ಅವರು ಬರೆದಿದ್ದಾರೆ. ಅಪಘಾತದಲ್ಲಿ ಮೃತಪಟ್ಟಿದ್ದ ಬಿಜೆಪಿ ಹಿರಿಯ ನಾಯಕ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ಪುತ್ರಿ ಪಂಕಜಾ. ತಂದೆಯ ಅರುವತ್ತನೇ ಜನ್ಮವಾರ್ಷಿಕ ಡಿಸೆಂಬರ್ ಹನ್ನೆರಡಕ್ಕಿದೆ. ಅದಕ್ಕಿಂತ ಮೊದಲು ಹೊಸ ರಾಜಕೀಯ ತೀರ್ಮಾನ ಕೈಗೊಳ್ಳಲಿರುವೆ ಎಂದು ಪಂಕಜಾ ಸೂಚನೆ ನೀಡಿದರು. ಮಹಾರಾಷ್ಟ್ರದ ಬದಲಾದ ರಾಜಕೀಯ ವಾತಾವರಣದಲ್ಲಿ ಭವಿಷ್ಯದ ಕುರಿತು ಚಿಂತಿಸಿ ಹೆಜ್ಜೆ ಇಡುವುದಾಗಿ ಅವರು ಹೇಳಿದರು. ಪಂಕಜಾ ಮಹಾರಾಷ್ಟ್ರ ಚುನಾವಣೆಯಲ್ಲಿ ಪಾರ್ಲಿಮೆಂಟಿಗೆ ಸ್ಪರ್ಧಿಸಿದ್ದರು ಎನ್‍ಸಿಪಿ ನಾಯಕ ಧನಂಜಯ ಮುಂಢೆಯೆದುರು ಸೋಲುಂಡಿದ್ದರು. ಧನಂಜಯ, ಪಂಕಜಾರ ಸಹೋದರ ಸಂಬಂಧಿಯಾಗಿದ್ದಾರೆ.