ಟ್ರಂಪ್ ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡ ಅಪಾಯಕಾರಿ ಅಧ್ಯಕ್ಷ: ನ್ಯಾನ್ಸಿ ಪಲೊಸಿ

0
430

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಟ್ರಂಪ್‍ರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕಿರುವುದು ಅನಿವಾರ್ಯವೆಂದು ಅಮೆರಿಕ ಜನಪ್ರತಿನಿಧಿ ಸಭೆಯ ಸ್ಫೀಕರ್ ನ್ಯಾನ್ಸಿ ಪಲೊಸಿ ಹೇಳಿದರು. ಅಮೆರಿಕದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲಿಕ್ಕಾಗಿ ನಾವು ತುರ್ತು ಕ್ರಮ ಜರಗಿಸಬೇಕಾಗುತ್ತದೆ ಎಂದು ಪಲೋಸಿ ಆಗ್ರಹಿಸಿದರು. ಅಮೆರಿಕದ ಸಂವಿಧಾನ, ಜನರ ಪ್ರಾತಿನಿಧ್ಯಕ್ಕೆ ಟ್ರಂಪ್ ದೊಡ್ಡ ಬೆದರಿಕೆ. ಅಧ್ಯಕ್ಷ ಟ್ರಂಪ್‍ರ ಪ್ರಜಾಪ್ರಭುತ್ವದ ಮೇಲಿನ ದಾಳಿಯ ಭೀಕರತೆ ದಿನಗಳೆದಂತೆ ತೀವ್ರತೆ ಪಡೆದುಕೊಳ್ಳುತ್ತಿದೆ. ಆದ್ದರಿಂದ ತುರ್ತು ಕ್ರಮ ಆವಶ್ಯಕವೆಂದು ಪಲೋಸಿ ಹೇಲಿದರು.

ಮಾನಸಿಕ ಸ್ಥಿಮಿತೆಯನ್ನು ಕಳೆದುಕೊಂಡ ಅಪಾಯಕಾರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆ ಇಲ್ಲದ ಕಾರಣದಿಂದಾಗಿ ಸಂವಿಧಾನದ 25ನೇ ತಿದ್ದುಪಡಿ ಪ್ರಕಾರ ಅವರನ್ನು ಹೊರದಬ್ಬಬೇಕು ಮತ್ತು ಉಪಾಧ್ಯಕ್ಷ ಮೈಕ್‌ ಪೆನ್ಸ್‌‌ರವರಲ್ಲಿ ಪಲೊಸಿ ಆಗ್ರಹಿಸಿದರು. ಗಲಭೆಗೆ ಕರೆ ನೀಡಿದ ಟ್ರಂಪ್ ಸಂವಿಧಾನದ 25ನೇ ತಿದ್ದುಪಡಿಯ ಪ್ರಕಾರ ಹೊರಗೆ ಹಾಕಬೇಕೆಂದು ಉಪಾಧ್ಯಕ್ಷ ಮೈಕ್ ಪೆನ್ಸ್‌ರೊಂದಿಗೆ ಆಗ್ರಹಿಸಲು ಡೆಮಕ್ರಾಟರು ತೀರ್ಮಾನಿಸಿದ್ದೇವೆ. ಉಪಾಧ್ಯಕ್ಷರು ಒಪ್ಪಿಗೆ ಸೂಚಿಸಿದರೆ ಟ್ರಂಪ್‍ರನ್ನು ಹೊರದಬ್ಬುವ ಇಂಪೀಚ್‍ಮೆಂಟ್ ಪ್ರಸ್ತಾವವನ್ನು ನಾವು ಪ್ರತಿನಿಧಿ ಸಭೆಯಲ್ಲಿ ಮಂಡಿಸುತ್ತೇವೆ. ಇದೇವೇಳೆ ಜೊ ಬೈಡನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ 100 ದಿನಗಳ ಬಳಿಕ ಟ್ರಂಪ್ ವಿರುದ್ಧ ಪ್ರಸ್ತಾಪವನ್ನು ಸೆನೆಟ್‍ನಲ್ಲಿ ಮಂಡಿಸಿದರೆ ಸಾಕೆಂದೂ ನಮ್ಮಲ್ಲಿ ಚಿಂತನೆಯಿದೆ ಎಂದು ಪಲೋಸಿ ಹೇಳಿದರು.