ಅಮಿತಾಭ್ ಬಚ್ಚನ್‍ ಧ್ವನಿಯ ಕೊರೋನ ಜಾಗೃತಿ ಕಾಲರ್ ಟ್ಯೂನ್‌ ವಿರುದ್ಧ ದಿಲ್ಲಿ ಹೈ ಕೋರ್ಟಿಗೆ ಅರ್ಜಿ

0
233

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.8: ಫೋನ್ ಮುಖಾಂತರ ಮುನ್ನೆಚ್ಚರಿಕೆ ಸಂದೇಶಕ್ಕೆ ಅಮಿತಾಭ್ ಬಚ್ಚನ್‍ರ ಧ್ವನಿಯನ್ನು ಉಪಯೋಗಿಸಬಾರದು. ಬಚ್ಚನ್ ಮತ್ತು ಅವರ ಕುಟುಂಬಕ್ಕೆ ಕೊರೋನ ಬಂದಿತ್ತು. ಅವರಿಂದ ಜಾಗೃತಿ ಸಂದೇಶ ನೀಡುವುದು ನಿಲ್ಲಿಸಬೇಕೆಂದು ಆಗ್ರಹಿಸಿ ದಿಲ್ಲಿ ಹೈ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ದಿಲ್ಲಿಯ ಸಾಮಜಿಕ ಕಾರ್ಯಕರ್ತ ರಾಕೇಶ್ ಎಂಬವರು ಅರ್ಜಿ ಸಲ್ಲಿಸಿದ್ದು ಅಮಿತಾಭ್ ಬಚ್ಚನ್ ಕುಟುಂಬಕ್ಕೆ ಕೊರೋನ ಬಂದಿತ್ತು. ಆದ್ದರಿಂದ, ಕೊರೋನ ಮಾನದಂಡ ಅನುಸಾರ ಜಾಗೃತಿಗೆ ಅವರ ಧ್ವನಿಗೆ ಅರ್ಹತೆಯಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಬಚ್ಚನ್‍ರಿಗೆ ಇದಕ್ಕಾಗಿ ಹಣ ಕೊಡಲಾಗುತ್ತಿದೆ. ಕೊರೋನ ಹೋರಾಟದಲ್ಲಿ ಉಚಿತವಾಗಿ ಸಹಕರಿಸಲು ನೂರಾರು ಮಂದಿ ತಯಾರಿದ್ದಾರೆ. ಆದ್ದರಿಂದ ಹಣ ಕೊಡುವ ಧ್ವನಿಯನ್ನು ಪಡೆದುಕೊಳ್ಳಬೇಕಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಆದರೆ, ಈ ಬಗ್ಗೆ ಅಮಿತಾಭ್ ಬಚ್ಚನ್ ಇದುವರೆಗೆ ಪ್ರತಿಕ್ರಿಯಿಸಿಲ್ಲ. ಜನವರಿ 18ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ.