ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಗಗನಕ್ಕೆ: ಬರೇ ಎರಡೂವರೆ ತಿಂಗಳಲ್ಲಿ ಪೆಟ್ರೋಲಿಗೆ 4.21 ರೂ., ಡೀಸೆಲ್‍ಗೆ 4.41ರೂ. ಹೆಚ್ಚಳ: ಚುನಾವಣೆ ಹತ್ತಿರವಾಗುವಾಗ ಇಳಿಸುವ ತಂತ್ರ?

0
677

ಹೊಸದಿಲ್ಲಿ, ಮಾ.21: ಸಾರ್ವತ್ರಿಕ ಚುನಾಣೆಯ ಪ್ರಚಾರ ಒಂದೆಡೆ ಬಿರುಸನ್ನು ಪಡೆದುಕೊಳ್ಳುತ್ತಿದ್ದರೆ ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ಬೆಲೆಗಗನ ಚುಂಬಿಸಲು ಸಜ್ಜಾಗಿದೆ. ಈ ವರ್ಷ ಆರಂಭದಿಂದ ಎರಡೂವರೆ ತಿಂಗಳಲ್ಲಿ ಪೆಟ್ರೋಲಿಗೆ 4.21 ರೂಪಾಯಿ ಮತ್ತು ಡೀಸೆಲ್‍ಗೆ 4.41 ರೂಪಾಯಿ ಹೆಚ್ಚಳವಾಗಿದೆ.

ಜನುವರಿ ಒಂದರಿಂದ ತಿರುವನಂತಪುರಂನಲ್ಲಿ ಪೆಟ್ರೋಲ್‍ಗೆ 71.82 ರೂಪಾಯಿ ಇತ್ತು. ಡೀಸೆಲ್‍ಗೆ 67.41 ರೂಪಾಯಿಯಾಗಿತ್ತು. ಆದರೆ ಈಗ ತಿರುವನಂತಪುರಂನಲ್ಲಿ ಪೆಟ್ರೋಲ್‍ಗೆ 76.11 ರೂಪಾಯಿ ಮತ್ತು ಡೀಸೆಲ್‍ಗೆ 71.82 ರೂಪಾಯಿ ದರವಿದೆ.

ದೇಶದ ಗಮನ ಚುನಾವಣೆಯತ್ತ ತಿರುಗಿದಾಗ ಪೆಟ್ರೋಲ್ ದರವನ್ನು ತೈಲ ಕಂಪೆನಿಗಳು ಮನಸೋ ಇಚ್ಛೆ ಹೆಚ್ಚಿಸುವ ತಂತ್ರ ಹೂಡಿವೆ. ಲೋಕಸಭಾ ಚುನಾವಣೆ ಹತ್ತಿರವಾಗುವಾಗ ತೈಲ ಬೆಲೆ ಇಳಿಕೆಯ ಎಂಬ ತಂತ್ರ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.